ಮಂಗಳವಾರ, ಅಕ್ಟೋಬರ್ 20, 2020
26 °C

ಬ್ಯಾಂಕ್‌ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ಹೋಬಳಿಯ ಕಡಗತ್ತೂರು ಗ್ರಾಮದಲ್ಲಿರುವ ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿ ಗ್ರಾಹಕರ ಸಮಸ್ಯೆ
ಗಳಿಗೆ ಸರಿಯಾಗಿ ಸ್ಪಂದಿಸದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಪ್ರತಿಭಟನೆ ನಡೆಸಿದರು.

ಆರು ತಿಂಗಳಿಂದ ಪಾಸ್ ಬುಕ್ ಎಂಟ್ರಿ ಮಾಡಿಕೊಡುತ್ತಿಲ್ಲ. ಕೃಷಿ ಸಾಲ, ಬಂಗಾರದ ಮೇಲೆ ಸಾಲ ನೀಡಲು ಸತಾಯಿಸುತ್ತಾರೆ. ಪಿಂಚಣಿ ಹಣ ಪರಿಶೀಲಿಸಿ, ಎಂಟ್ರಿ ಮಾಡಿಕೊಡಲು ತಾಂತ್ರಿಕ ನೆಪವೊಡ್ಡುತ್ತಾರೆ ಎಂದು ಗ್ರಾಹಕರು ಆರೋಪಿಸಿದರು.

‘ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೂ ಗ್ರಾಹಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಪಾಸ್‌ಬುಕ್‌, ಪಿಂಚಣಿ ಹಣ ಎಂಟ್ರಿ ಮಾಡುವುದನ್ನು ಹೊರತುಪಡಿಸಿ ಉಳಿದೆಲ್ಲಾ ಕೆಲಸಗಳನ್ನು ನಾವೇ ಮಾಡುತ್ತಿದ್ದೇವೆ’ ಎಂದು ಎಸ್‌ಬಿಐ ಕಡಗತ್ತೂರು ಶಾಖೆ ವ್ಯವಸ್ಥಾಪಕ ವಿನೋದ್‌ ಹೇಳಿದರು.

ಪ್ರತಿಭಟನೆಯಲ್ಲಿ ಜಗನ್ನಾಥರೆಡ್ಡಿ, ತಿಮ್ಮಾರೆಡ್ಡಿ, ಶ್ರೀನಿವಾಸ್, ನಿಖಿಲ್, ಆದಿ, ಗಂಗಾಧರ್, ವೀರಭದ್ರಪ್ಪ ಇದ್ದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು