ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು: ವಿದ್ಯುತ್‌ ಖಾಸಗಿಕರಣ ವಿರೋಧಿಸಿ ಪ್ರತಿಭಟನೆ

Last Updated 7 ಅಕ್ಟೋಬರ್ 2020, 3:07 IST
ಅಕ್ಷರ ಗಾತ್ರ

ತಿಪಟೂರು: ವಿದ್ಯುತ್ ಖಾಸಗಿಕರಣದಿಂದ ನೌಕರರು, ಅಧಿಕಾರಿಗಳ ಹಾಗೂ ರಾಜ್ಯದ ಬೊಕ್ಕಸ ಹಾಗೂ ಗ್ರಾಹಕರಿಗೆ ಸಾಕಷ್ಟು ನಷ್ಟ ಆಗಲಿದೆ. ಇದನ್ನು ಖಂಡಿಸಿ ರಾಜ್ಯಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಜಯಪ್ಪ ಒತ್ತಾಯಿಸಿದರು.

ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ಹಾಗೂ ವಿದ್ಯುತ್ ಕಾಯ್ದೆ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ನೌಕರರ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದಿಂದ ಸಾಂಕೇತಿಕ ಧರಣಿ ನಡೆಸಿದರು.

ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣ ಮಾಡುತ್ತಿರುವುದು ಕಾರ್ಮಿಕ ವಿರೋಧಿಯಾಗಿದೆ. ಇದರಿಂದ ರೈತರು, ಗ್ರಾಹಕರು, ಜನಸಾಮಾನ್ಯರು ಸೇರಿದಂತೆ ಬೆಸ್ಕಾಂ ನೌಕರರಿಗೂ ಹೊರೆಯಾಗಲಿದೆ. ಕೇಂದ್ರ ಸರ್ಕಾರ ಖಾಸಗಿಕರಣ ಮಾಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಕೂಡಲೇ ರಾಜ್ಯಸರ್ಕಾರ ಕಾಯ್ದೆಯನ್ನು ತಿದ್ದುಪಡಿಗೆ ಆಗ್ರಹಿಸಿ ಜಾರಿಗೆ ಮುಂದಾಗಬೇಕು ಎಂದರು.

ಸಹಾಯಕ ಎಂಜಿನಿಯರ್‌ಗಳಾದ ಹರಿಹರಪ್ಪ, ರಾಜಶೇಖರ್, ಚೇತನ್, ಪರಮೇಶ್ವರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT