ಪಂಪ್‍ಸೆಟ್‍, ಪೂರಕ ಸಾಮಗ್ರಿ ವಿತರಣೆ

7

ಪಂಪ್‍ಸೆಟ್‍, ಪೂರಕ ಸಾಮಗ್ರಿ ವಿತರಣೆ

Published:
Updated:
Deccan Herald

ತುಮಕೂರು: ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅರ್ಹ ಫಲಾನುಭವಿಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಪಂಪ್‍ಸೆಟ್‍ನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, 2017-18 ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ 11 ಜನ ಫಲಾನುಭವಿಗಳಿಗೆ ಆಯ್ಕೆ ಮಾಡಲಾಗಿತ್ತು ಎಂದು ತಿಳಿಸಿದರು.

ಅದರಂತೆ ಕೊಳವೆ ಬಾವಿ ಕೊರೆಸಿ ಶನಿವಾರ (ಆಗಸ್ಟ್ 4) ಪಂಪ್ ಸೆಟ್ ಹಾಗೂ ಅದಕ್ಕೆ ಬೇಕಾದ ಪೂರಕ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು ಎಂದರು.

ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕ ಎಂ.ತಿಮ್ಮರಾಯಪ್ಪ ಹಾಗೂ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಡಿ.ಜಯರಾಮಣ್ಣ ಇದ್ದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !