ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ: ತುಂಬಿ ಹರಿದ ಜಯಮಂಗಲಿ, ಸುವರ್ಣಮುಖಿ

Published : 20 ಆಗಸ್ಟ್ 2024, 3:21 IST
Last Updated : 20 ಆಗಸ್ಟ್ 2024, 3:21 IST
ಫಾಲೋ ಮಾಡಿ
Comments

ತುಮಕೂರು: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು.

ಕೊರಟಗೆರೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಜಯಮಂಗಲಿ, ಸುವರ್ಣಮುಖಿ ನದಿಗಳು ಧುಮ್ಮಿಕ್ಕಿ ಹರಿಯುತ್ತಿವೆ.

ಜಯಮಂಗಲಿ ನದಿಯು ಮಧುಗಿರಿ ತಾಲ್ಲೂಕಿನ ಚನ್ನಸಾಗರ, ಹಂದ್ರಾಳು, ಪುರವರ, ಇಮ್ಮಡಗೊಂಡನಹಳ್ಳಿ, ವೀರಾಪುರ, ಕಾಳೇನಹಳ್ಳಿ, ಹೊಸಹಳ್ಳಿ, ರೆಡ್ಡಿಹಳ್ಳಿ, ಕೊಡಿಗೇನಹಳ್ಳಿ, ತೆರಿಯೂರು, ಮುದ್ದೇನಹಳ್ಳಿ ಮಾರ್ಗವಾಗಿ ಆಂಧ್ರಪ್ರದೇಶ ಸೇರುತ್ತದೆ. ರಭಸವಾಗಿ ಹರಿಯುತ್ತಿರುವ ನೀರು‌ ನೋಡಲು ರೆಡ್ಡಿಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ನದಿ ಬಳಿ ಜಮಾಯಿಸಿದ್ದಾರೆ.

ಕೊರಟಗೆರೆ ಪಟ್ಟಣದ ಕೆಲ ಬೀದಿಗಳು ಜಲಾವೃತಗೊಂಡಿದ್ದವು. ಪಟ್ಟಣದ ದೀಪಂ ಟೆಕ್ಸ್ ಟೈಲ್ ಕಟ್ಟಡದ ನೆಲ ಅಂತಸ್ತು ಸಂಪೂರ್ಣವಾಗಿ ಜಲಾವೃತವಾಗಿತ್ತು. ಕಿಯೋನಿಕ್ಸ್ ತರಬೇತಿ ಕೇಂದ್ರದ ಬೀದಿ, ಸಂಧ್ಯಾ ಮೆಡಿಕಲ್ ಬೀದಿ, ಶಿವಗಂಗಾ ಚಿತ್ರ ಮಂದಿರದ ಹಿಂಭಾಗದ ಬೀದಿಗಳ ನೆಲ ಅಂತಸ್ತಿನ ಮನೆಗಳಿಗೆ ನೀರು ನುಗ್ಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಾತ್ರಿ ಇಡೀ ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಪಟ್ಟಣ ಹೊರವಲಯದ ಊರ್ಡಿಗೆರೆ ಕ್ರಾಸ್ ನ ಮುಖ್ಯರಸ್ತೆಯಲ್ಲಿ ನೀರು ನಿಂತಿದ್ದರಿಂದ ಸೋಮವಾರ ರಾತ್ರಿ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.

ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಬಳಿ ತುಂಬಿ ಹರಿಯುತ್ತಿರುವ ಜಯಮಂಗಲಿ ನದಿ ವೀಕ್ಷಿಸಲು ಸೇತುವೆ ಬಳಿ ಜಮಾಯಿಸಿರುವ ಜ

ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಬಳಿ ತುಂಬಿ ಹರಿಯುತ್ತಿರುವ ಜಯಮಂಗಲಿ ನದಿ ವೀಕ್ಷಿಸಲು ಸೇತುವೆ ಬಳಿ ಜಮಾಯಿಸಿರುವ ಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT