ತುರುವೇಕೆರೆ: ಸ್ಕೂಲ್ನಲ್ಲಿ ಮೂಡಿದ ಮಳೆ ಬಿಲ್ಲು

ತುರುವೇಕೆರೆ: ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಶಿಕ್ಷಕರು ಮತ್ತು ಸಿಬ್ಬಂದಿ ಹೂವು, ಸಿಹಿ ಪದಾರ್ಥ ನೀಡಿ ಶಾಲೆಗಳಿಗೆ ಸ್ವಾಗತಿಸಿದರು.
ಎಲ್ಲಾ ಶಾಲೆಗಳಲ್ಲಿ ಕೊಠಡಿ ಮತ್ತು ಆವರಣವನ್ನು ಶುಚಿಗೊಳಿಸಲಾಗಿತ್ತು. ಶಾಲೆಯ ಮುಂಭಾಗ ಬಣ್ಣ ಬಣ್ಣದ ರಂಗೋಲಿ ಬಿಟ್ಟು ಮಕ್ಕಳಿಗೆ ಶುಭ ಕೋರಲಾಯಿತು. ಕೊಠಡಿಗಳ ಮುಂಭಾಗ ಮಾವಿನ ತೋರಣ, ಬಾಳೆ ಕಂದು ಕಟ್ಟಿ ಸಿಂಗರಿಸಲಾಗಿತ್ತು.
ಬೆಳಿಗ್ಗೆ 9.30ಕ್ಕೆ ಶಾಲೆಗಳ ಮುಂಭಾಗದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಸರದಿ ಸಾಲಿನಲ್ಲಿ ನಿಂತ ಮಕ್ಕಳಿಗೆ ಗುಲಾಬಿ ಹೂ, ಬಲೂನ್ ಮತ್ತು ಚಾಕೊಲೇಟ್ ನೀಡಿದರು.
ಕೊಡಗಿಹಹಳ್ಳಿ, ದೊಡ್ಡಗೋರಾ ಘಟ್ಟ, ಜಿಜೆಸಿ ಸರ್ಕಾರಿ ಪ್ರೌಢಶಾಲೆ, ಪಟ್ಟಣದ ಬಾಲಕರ ಹಿರಿಯ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡಲಾಯಿತು. ಕಣತೂರು, ನಾಗೇಗೌಡನಬ್ಯಾಲಾ, ಬಾಣಸಂದ್ರ ಸೇರಿದಂತೆ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಲಾಯಿತು. ಜೆ.ಪಿ. ಆಂಗ್ಲ ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ದ್ವಾರವನ್ನು ಬಲೂನ್ಗಳ ಗುಚ್ಛದಿಂದ ಅಲಂಕರಿಸಲಾಗಿತ್ತು. ಇಂದಿನಿಂದ ಮಳೆ ಬಿಲ್ಲು ಕಾರ್ಯ ಚಟುವಟಿಕೆ ಆರಂಭಿಸಿ ಓದು, ಬರಹ ಮತ್ತು ಲೆಕ್ಕಾಚಾರ ಸಾಮರ್ಥ್ಯ ಬೆಳೆಸುವಂತೆ ಪ್ರೇರೇಪಿಸಲಾಯಿತು.
ಬಿಆರ್ಸಿ, ಸಿಆರ್ಪಿ ನೇತೃತ್ವದ ಮಿಂಚು ಸಂಚಾರ ತಂಡ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ
ಪರಿಶೀಲಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.