ತುಮಕೂರು: ಉಪಮುಖ್ಯಮಂತ್ರಿ ಡಾ.ಪರಮೇಶ್ವರರಿಂದ ಧ್ವಜಾರೋಹಣ

7

ತುಮಕೂರು: ಉಪಮುಖ್ಯಮಂತ್ರಿ ಡಾ.ಪರಮೇಶ್ವರರಿಂದ ಧ್ವಜಾರೋಹಣ

Published:
Updated:

ತುಮಕೂರು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿದರು.

ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ‘ಆಧುನಿಕ ಜನತಂತ್ರ ವ್ಯವಸ್ಥೆಯ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಪ್ರಗತಿಗಾಗಿ ಶ್ರಮಿಸುತ್ತಿವೆ. ರಾಷ್ಟ್ರದ ಹಿರಿಮೆಯಾದ ಅಹಿಂಸೆ, ಸತ್ಯ, ಶಾಂತಿ ಎಂಬ ಮಂತ್ರಗಳನ್ನು ಜನಾಮಾನಸದಲ್ಲಿ ನೆಲೆಗೊಳಿಸಲು ನಾವೆಲ್ಲರೂ  ಸಹೋದರತೆಯಿಂದ ಮುನ್ನಡೆಯಬೇಕಿದೆ’ ಎಂದರು.

‘ಇಂತಹ ರಾಷ್ಟ್ರೀಯ ಹಬ್ಬಗಳ ಆಚರಣೆಯಿಂದ ಮಮತೆಯನ್ನು ಬೆಳಗುವ ಸಹನೆಯನ್ನು ಬಿತ್ತುವ, ಏಕತೆಯನ್ನು ಬೆಳೆಸುವ ಹೃದಯ ಸಂಸ್ಕಾರ ನಮ್ಮಲ್ಲಿ ಒಡಮೂಡಲಿ ಎಂದು ಅಶಿಸುತ್ತೇನೆ’ ಎಂದು ನುಡಿದರು.

ಶಿವಕುಮಾರ ಸ್ವಾಮೀಜಿ, ಸೂಲಗಿತ್ತಿ ನರಸಮ್ಮ ಸ್ಮರಣೆ
ತುಮಕೂರು:
ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಸೂಲಗಿತ್ತಿ ನರಸಮ್ಮ ಅವರನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸ್ಮರಿಸಿದರು.

‘ಶಿವಕುಮಾರ ಸ್ವಾಮೀಜಿಯವರು ಲಕ್ಷಾಂತರ ಹಸಿದ ಮಕ್ಕಳಿಗೆ ಅನ್ನದಾಸೋಹ ಮತ್ತು ಜ್ಞಾನ ದಾಸೋಹವನ್ನು ನೀಡುವ ಮೂಲಕ ಆಧುನಿಕ ಬಸವಣ್ಣನವರಾಗಿದ್ದರು’ ಎಂದರು.

‘ಭಕ್ತರ ಪಾಲಿಗೆ ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಶ್ರೀಗಳು ತಮಗೆ ತಾವೇ ಸರಿ ಸಾಟಿಯಾಗಿದ್ದರು. ಅವರ ಅಗಲಿಕೆ ನಮ್ಮೆಲ್ಲರಿಗೂ, ನಾಡಿನ ಜನತೆಗೆ ನೋವುಂಟು ಮಾಡಿದೆ’ ಎಂದರು.

‘ಪದ್ಮಶ್ರೀ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ ಅನಕ್ಷರಸ್ಥರಾಗಿದ್ದರೂ ಆಗಿನ ಕಾಲದಲ್ಲೇ ತಮ್ಮ ನೈಪುಣ್ಯತೆಯಿಂದ ಸಾವಿರಾರು ಹೆರಿಗೆಗಳನ್ನು ಮಾಡಿಸಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ಅವರ ಮಾನವಿಕ ಸೇವೆಯನ್ನು ಗುರುತಿಸಿ ರಾಜ್ಯ ಹಾಗೂ ಕೇಂದ್ತ ಸರ್ಕಾರಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ’ ಎಂದರು.


ಗಣರಾಜ್ಯೋತ್ಸವ ಆಚರಣೆಯಲ್ಲಿ ವಂದೇ ಮಾತರಂ ಗೀತೆಗೆ ಶಾಲಾ ಮಕ್ಕಳ ನೃತ್ಯ ಗಮನ ಸೆಳೆಯಿತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !