ಭಾನುವಾರ, ಆಗಸ್ಟ್ 25, 2019
21 °C

3 ಗಲ್ಲಿಗಳಲ್ಲಿ ದ್ವಿಚಕ್ರವಾಹನ ನಿಲುಗಡೆಗೆ ಆಯುಕ್ತರ ಮನವಿ

Published:
Updated:
Prajavani

ತುಮಕೂರು: ’ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ಮಹಾನಗರ ಪಾಲಿಕೆಯು ಎಂ.ಜಿ.ರಸ್ತೆ, ಜನರಲ್ ಕಾರ್ಯಪ್ಪ ರಸ್ತೆಗೆ ಸಂಪರ್ಕ ಕಲ್ಪಿಸುವ ಮೂರು ಗಲ್ಲಿಗಳಲ್ಲಿ (ಕನ್ಸರ್‌ವೆನ್ಸಿ) ದ್ವಿಚಕ್ರವಾನ ನಿಲುಗಡೆ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರು ಬಳಸಿಕೊಳ್ಳಬೇಕು’ ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದ್ದಾರೆ.

’ಈ ಜಾಗಗಳನ್ನು ದ್ವಿಚಕ್ರವಾಹನ ನಿಲುಗಡೆ ಸ್ಥಳಗಳನ್ನಾಗಿ ಜಿಲ್ಲಾಧಿಕಾರಿ ಜುಲೈ 7ರಂದು ಅಧಿಸೂಚನೆ ಹೊರಡಿಸಿದ್ದಾರೆ. ಜುಲೈ 26ರಿಂದ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 1ರಿಂದ ದ್ವಿಚಕ್ರವಾಹನ ನಿಲುಗಡೆಗೆ ಶುಲ್ಕ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

’ಮೊದಲ ಕನ್ಸರ್‌ವೆನ್ಸಿ ಜನರಲ್ ಕಾರ್ಯಪ್ಪ ರಸ್ತೆಯಿಂದ ಫೆಡರಲ್ ಬ್ಯಾಂಕ್ ಪಕ್ಕದ ಕನ್ಸರವೆನ್ಸಿಯವರೆಗೆ, 2ನೇ ಕನ್ಸರ್‌ವೆನ್ಸಿ ಜನರಲ್ ಕಾರ್ಯಪ್ಪ ರಸ್ತೆಯಿಂದ ಮೋರ್ ಪಕ್ಕದ ರಸ್ತೆಯವರೆಗೆ, 3ನೇ ಕನ್ಸರ್‌ವೆನ್ಸಿ ಜನರಲ್ ಕಾರ್ಯಪ್ಪ ರಸ್ತೆಯಿಂದ ವಿಜಯಾ ಬ್ಯಾಂಕ್ ಎದುರುಗಡೆ ರಸ್ತೆಯವರೆಗೆ ಇದೆ’ ಎಂದು ಹೇಳಿದ್ದಾರೆ.

’1ಗಂಟೆಯಿಂದ 8 ರವರೆಗೆ ( 8 ತಾಸು) ನಿಲುಗಡೆ ಮಾಡಿದರೆ ₹ 5, 16 ತಾಸು ನಿಲುಗಡೆ ಮಾಡಿದರೆ ₹ 10, ₹ 16ರಿಂದ 24 ತಾಸು ನಿಲುಗಡೆ ಮಾಡಿದರೆ ₹ 15 ಶುಲ್ಕ ನಿಗದಿಪಡಿಸಲಾಗಿದೆ’ ಎಂದು ಹೇಳಿದ್ದಾರೆ.

’ಈ ಸ್ಥಳಗಳಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ದ್ವಿಚಕ್ರವಾಹನ ನಿಲುಗಡೆ ಮಾಡಬೇಕು. ತಪ್ಪಿದ್ದಲ್ಲಿ ಸಂಚಾರ ಠಾಣೆ ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ. ಈ ಸ್ಥಳಗಳಲ್ಲಿ ವ್ಯಾಪಾರ ಚಟುವಟಿಕೆ ನಿಷೇಧಿಸಲಾಗಿದೆ’ ಎಂದು ಹೇಳಿದ್ದಾರೆ.

Post Comments (+)