ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಕ್ ಕಾರ್ಡ್‌ನೊಂದಿಗೆ ದಾಖಲೆ ಲಿಂಕ್ ಗೆ ಮನವಿ

Last Updated 13 ಅಕ್ಟೋಬರ್ 2019, 15:35 IST
ಅಕ್ಷರ ಗಾತ್ರ

ತುಮಕೂರು: ’ತಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ (ಎಪಿಕ್ ಕಾರ್ಡ್)ಯೊಂದಿಗೆ ಆಧಾರ್, ಡಿ.ಎಲ್, ಪಾಸ್‌ಪೋರ್ಟ್‌ಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಲಿಂಕ್ ಮಾಡಿಸಿಕೊಳ್ಳಲು ಮಂಗಳವಾರದವರೆಗೆ (ಅ.15ರವರೆಗೆ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ನಗರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿ ಹಾಗೂ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಪಾಲಿಕೆಯ ವ್ಯಾಪ್ತಿಯಲ್ಲಿರುವ ಮತದಾರರು ತಮ್ಮ ಅಗತ್ಯ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಪಾಲಿಕೆ ನೀರು ಸರಬರಾಜು ಸಿಬ್ಬಂದಿ, ಆರೋಗ್ಯ ನಿರೀಕ್ಷಕರು, ಕರವಸೂಲಿಗಾರರು, ಇನ್ನಿತರ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಥವಾ ಪಾಲಿಕೆ ಮತದಾರರ ಸೇವಾ ಕೇಂದ್ರದಲ್ಲಿ ಸಲ್ಲಿಸಿ ಲಿಂಕ್ ಮಾಡಿಸಬಹುದಾಗಿದೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗವು ಮತದಾರರ ಅನುಕೂಲಕ್ಕಾಗಿ ವೋಟರ್ ಹೆಲ್ಪ್‌ಲೈನ್ ಮೊಬೈಲ್ ಆ್ಯಪ್ ತಂತ್ರಾಂಶ ಬಿಡುಗಡೆ ಮಾಡಿದೆ. ಈ ಆ್ಯಪ್‌ ಮುಖಾಂತರ ತಮ್ಮ ಕುಟುಂಬದ ಸದಸ್ಯರ ಮತದಾರರ ಗುರುತಿನ ಚೀಟಿಗೆ ಈಗಾಗಲೇ ಸೂಚಿಸಿದ ದಾಖಲೆಗಳಲ್ಲಿ ಯಾವುದಾದರೊಂದನ್ನು ಲಿಂಕ್ ಮಾಡಿಕೊಳ್ಳಬಹುದು. ನ್ಯಾಷನಲ್ ವೋಟರ್ಸ್ ಸರ್ವೀಸ್ ಪೋರ್ಟಲ್ ಮೂಲಕ ಮತದಾರರೇ ಖುದ್ದಾಗಿ ಲಿಂಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT