ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಮುಂದುವರಿಸಲು ಮನವಿ

Last Updated 11 ಮೇ 2020, 15:04 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮುಂದುವರಿಸಬೇಕು ಎಂದು ತುಮಕೂರು ನಗರ ನಾಗರಿಕ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರವು ಬೆಂಗಳೂರಿಗೆ ಹತ್ತಿರವಿದೆ. ಬೆಂಗಳೂರು ಪ್ರವೇಶಿಸುವವರಿಗೆ ಮುಖ್ಯ ಮಾರ್ಗವಾಗಿದೆ. ಜನದಟ್ಟಣೆ ಹೆಚ್ಚಿರುತ್ತದೆ. ರಂಜಾನ್ ಹಬ್ಬ ಹತ್ತಿರ ಇದೆ. ಎಂ.ಜಿ.ರಸ್ತೆಯಲ್ಲಿ ಸಾವಿರಾರು ಮುಸ್ಲಿಮರು ಒಟ್ಟಾಗಿ ವ್ಯಾಪಾರ ವಹಿವಾಟು ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೊರೊನಾ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಆದ್ದರಿಂದ ನಗರದ ವ್ಯಾಪ್ತಿಯಲ್ಲಿರುವ ಎಲ್ಲ ಮಸೀದಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಅಲ್ಲಿರುವ ತಬ್ಲಿಗಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ರಂಜಾನ್ ಮುಗಿಯುವವರೆಗೂ ಅಥವಾ ಸೋಂಕು ನಿವಾರಣೆ ಆಗುವವರೆಗೂ ಕೆಲ ಬಡಾವಣೆಗಳಿಗೆ ವಿಧಿಸಿರುವ ಸೀಲ್‍ಡೌನ್ ತೆರವುಗೊಳಿಸಬಾರದು ಎಂದು ವೇದಿಕೆಯ ರಕ್ಷಿತ್ ಕುಮಾರ್, ಜಗದೀಶ್, ಶಿವರುದ್ರಪ್ಪ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT