ಪಾವಗಡ: ತಾಲ್ಲೂಕಿನ ಕಡಮಲಕುಂಟೆ ಗೇಟ್ ಬಳಿ ದ್ವಿಚಕ್ರ ವಾಹನ ಹಾಗೂ ಬೊಲೆರೊ ಲಗೇಜ್ ವಾಹನದ ನಡುವೆ ಶನಿವಾರ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ರೊದ್ದಂಮಂಡಲಂ ಚಿನ್ನಕೋಡಿಪಲ್ಲಿ ಗ್ರಾಮದ ಯಶ್ವಂತ್ (18), ಈಶ್ವರ್ (18) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ರಾಮು ತೀವ್ರವಾಗಿ ಗಾಯಗೊಂಡಿದ್ದಾರೆ.
ಪಟ್ಟಣದ ಕಡೆಯಿಂದ ಕೊಡಮಡುಗು ಕಡೆಗೆ ಹೋಗುವಾಗ ದ್ವಿಚಕ್ರ ವಾಹನಕ್ಕೆ ಬೊಲೆರೊ ಲಗೇಜ್ ವಾಹನ ಡಿಕ್ಕಿಯಾಗಿದೆ. ಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.