ಬುಧವಾರ, ಆಗಸ್ಟ್ 17, 2022
28 °C
ಕುಣಿಗಲ್‌: ಸ್ಪರ್ಧಿಸದಂತೆ ತಡೆಯಲು ಮೂರು ದಿನದಲ್ಲಿ 9 ಪ್ರಕರಣ

ಚುನಾವಣಾ ಕಣಕ್ಕೆ ರೌಡಿಶೀಟರ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ರೌಡಿಶೀಟರ್ ಮೋದುರು ಗಿರಿ ಯತ್ನಿಸುತ್ತಿರುವುದು ಹಾಗೂ ರೌಡಿಯ ಸ್ಪರ್ಧೆ ತಡೆಯಲು ಕೆಲವರು ಪೊಲೀಸರಿಗೆ ದೂರು ನೀಡುವ ಮೂಲಕ ಯತ್ನಿಸುತ್ತಿರುವುದರಿಂದ ಗಮನ ಸೆಳೆಯುತ್ತಿದೆ.

ಮೋದುರು ಗಿರಿ ಒಂದು ವರ್ಷದಿಂದ ಮೋದುರಿನಲ್ಲಿಯೇ ನೆಲೆಸಿದ್ದಾರೆ. ಪ್ರೇಯಸಿಯೊಂದಿಗೆ ವಿವಾಹ ಮತ್ತು ಹುಟ್ಟಿದ ಹಬ್ಬವನ್ನು ಬೆಂಬಲಿಗರೊಂದಿಗೆ ಆಚರಿಸಿಕೊಂಡು, ಕೃಷಿ ಚಟುವಟಿಕೆ
ಯಲ್ಲಿ ತೊಡಗಿಕೊಂಡಿದ್ದಾರೆ.

ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ಮುನ್ನವೇ
ಬೆಂಗಳೂರು ಕಾಮಾಕ್ಷಿಪಾಳ್ಯಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ
ದಂತೆ ಬಂಧಿಸಿದ್ದಾರೆ. ಈ ನಡುವೆ ಪೊಲೀಸರ ಕಸ್ಟಡಿಯಲ್ಲಿರುವಾಗಲೇ ನ್ಯಾಯಾಲಯದ ಮೊರೆಹೋಗಿ ಸ್ಪರ್ಧೆಗೆ ಯತ್ನಿಸುತ್ತಿದ್ದಾನೆ. ಪೊಲೀಸರು ಮೋದುರು ಗಿರಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.

ಈ ನಡುವೆ ಮೋದೂರು ಗಿರಿಯಿಂದ ತೊಂದರೆಗೆ ಒಳಗಾದವರು ತಾಲ್ಲೂಕಿನ ಕುಣಿಗಲ್ ಮತ್ತು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಹಫ್ತಾ ವಸೂಲಿ, ಪ್ರಾಣ ಬೆದರಿಕೆ ಮತ್ತು ಬಲವಂತದ ಹಣ ವಸೂಲಿಗೆ ಸಂಬಂಧಿಸಿ
ದಂತೆ 9 ಮಂದಿ ದೂರು ನೀಡಿದ್ದಾರೆ. ಗಿರಿ ಮತ್ತು ಬೆಂಬಲಿಗರ ಮೇಲೆ ಮೂರು ದಿನದಲ್ಲಿ 9 ಪ್ರಕರಣ ದಾಖಲಾಗಿವೆ.
ತಾಲ್ಲೂಕಿನಲ್ಲಿ ಗಿರಿಯಿಂದ ತೊಂದರೆ
ಗೊಳಗಾದವರು ಇನ್ನೂ ಅನೇಕರಿದ್ದು, ನಿರ್ಭೀತಿಯಿಂದ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಈಗಾಗಲೇ ಗಿರಿ ಹೆಸರಿನಲ್ಲಿ ನಾಮಪತ್ರ ಪಡೆಯಲಾಗಿದ್ದು, ಜೈಲಿನಲ್ಲಿರುವ ಆತ ಹೇಗೆ ನಾಮಪತ್ರ ಸಲ್ಲಿಸುತ್ತಾನೆ ಎಂಬ ಕುತೂಹಲ
ಹೆಚ್ಚಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು