ಎಡೆಯೂರು ಹೋಬಳಿ ದೊಡ್ಡಮಧುರೆ ಸರ್ಕಾರಿ ಶಾಲೆಗೆ ಹಳೆ ವಿದ್ಯಾರ್ಥಿಗಳು ಸೇರಿ ‘ಮೈತ್ರಿ ಹಿರಿಯ ವಿದ್ಯಾರ್ಥಿಗಳ ಸಂಘ’ ರಚಿಸಿಕೊಂಡಿದ್ದಾರೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಸಂಘದ ಅಧ್ಯಕ್ಷ ಡಿ.ಎಸ್. ಪ್ರಕಾಶ್ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಿದ್ದಾರೆ. ನಿರ್ವಹಣೆ ಜವಾಬ್ದಾರಿಯನ್ನೂ ಸಂಘವೇ ಹೊತ್ತಿದೆ. ಎಡೆಯೂರು ಹೋಬಳಿ ಸೇರಿದಂತೆ ತುರುವೇಕೆರೆ ತಾಲ್ಲೂಕಿನ ಗಡಿ ಭಾಗವಾದ ಬಾನಿಪಾಳ್ಯ, ಗೈನಾಪುರ ಮತ್ತು ನರಿಗೆಹಳ್ಳಿಯಿಂದಲೂ ವಿದ್ಯಾರ್ಥಿಗಳು ದಾಖಲಾಗಿ ಬಸ್ ವ್ಯವಸ್ಥೆಯ ಅನುಕೂಲ ಪಡೆದಿದ್ದಾರೆ.