ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮದ ಟಿ.ಬಿ.ಕ್ರಾಸ್ ರಸ್ತೆಯಲ್ಲಿರುವ ‘ಪಿ.ಎಂ.ಎಂಟರ್ ಪ್ರೈಸಸ್’ ಮಳಿಗೆ ಮಾಲೀಕರು ಪರವಾನಗಿ ಇಲ್ಲದೆ ದಾಸ್ತಾನು ಮಾಡಿದ್ದ ಕೀಟನಾಶಕವನ್ನು ಸೆಪ್ಟೆಂಬರ್ 10ರಂದು ವಶಪಡಿಸಿಕೊಳ್ಳಲಾಗಿದೆ ಎಂದು ತುಮಕೂರು ಜಂಟಿ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.
ಮಳಿಗೆಯಿಂದ ₹31 ಸಾವಿರ ಮೌಲ್ಯದ ಕೀಟನಾಶಗಳನ್ನು ಅನಧಿಕೃತವಾಗಿ ಖರೀದಿಸಿ ವಿವಿಧ ಮಾರಾಟಗಾರರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ದಾಳಿ ನಡೆಸಲಾಗಿತ್ತು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಅಶ್ವಥ್ ನಾರಾಯಣ್, ಮಾಯಸಂದ್ರ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸೌಭಾಗ್ಯ ಎಚ್.ವಿ. ಹಾಜರಿದ್ದರು.