ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿತ್ರಿ ಬಾಯಿ ಫುಲೆ ಸ್ಮರಣೆ

Last Updated 4 ಜನವರಿ 2022, 6:23 IST
ಅಕ್ಷರ ಗಾತ್ರ

ಹುಳಿಯಾರು: ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನ ಆಚರಿಸಲಾಯಿತು.

ಸಿಆರ್‌ಪಿ ದಯಾನಂದ್‌ ಮಾತನಾಡಿ, ಧ್ವನಿಯಿಲ್ಲದ ಮಹಿಳೆಯರಿಗೆ ಫುಲೆ ಧ್ವನಿ ನೀಡಿದರು. ಅವರ ಕುಟುಂಬ ಅನೇಕ ನೋವನ್ನು ಉಂಡು ಮಾಡಿದ ಶಿಕ್ಷಣ ಸೇವೆ ಶ್ಲಾಘನೀಯ ಎಂದರು.

ಸೃಜನ ಮಹಿಳಾ ಸಂಘಟನೆಯ ಸಂಸ್ಥಾಪಕಿ ಎನ್. ಇಂದಿರಮ್ಮ ಸಾವಿತ್ರಿ ಬಾಯಿ ಫುಲೆ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದರು.

ಹುಳಿಯಾರಿನ ಸೃಜನ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಮ್ಮ ಫುಲೆ ಅವರ ಹೋರಾಟದ ಬಗ್ಗೆ
ತಿಳಿಸಿದರು.

ಮುಖ್ಯಶಿಕ್ಷಕಿ ಬಿ.ಎಸ್. ಪ್ರೇಮಲೀಲಾ, ಸುವರ್ಣ ವಿದ್ಯಾಚೇತನದ ಅಧ್ಯಕ್ಷ ರಾಮಕೃಷ್ಣಪ್ಪ, ಶಿಕ್ಷಕರಾದ ಮಹಾಲಕ್ಷ್ಮೀ, ವೆಂಕಟೇಶ್, ಶಕುಂತಲಾ, ಮಕ್ಕಳ ಮನೆ ಶಿಕ್ಷಕಿ ಚೈತ್ರಾ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT