ತುಮಕೂರು: ವಿಶ್ವಕರ್ಮ ಸಮುದಾಯದವರು ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು. ಅಮರಶಿಲ್ಪಿ ಜಕಣಾಚಾರಿ ಹೆಸರಲ್ಲಿ ಕೈದಾಳದಲ್ಲಿ ನಿರ್ಮಿಸಿರುವ ಭವನಕ್ಕೆ ಕಾಯಕಲ್ಪ ನೀಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಕೆ.ವಿ.ಕೃಷ್ಣಮೂರ್ತಿ
ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವಕರ್ಮ ಸಮಾಜದ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಮರಶಿಲ್ಪಿ ಜಕಣಾಚಾರಿ ಜನಪದೀಯ ದಂತ ಕಥೆಯಾಗಿ, ಮೇರು ಶಿಲ್ಪಿಯಾಗಿ ನಾಡಿಗೆ ಭವ್ಯ ಕೊಡುಗೆ ನೀಡಿದ್ದಾರೆ. ಅವರು ಕಾಲ್ಪನಿಕ ವ್ಯಕ್ತಿಯೆಂದು ಕೆಲವರು ವಾದಿಸುತ್ತಾರೆ. ತಾಲ್ಲೂಕಿನ ಕೈದಾಳದಲ್ಲಿ ಜನಿಸಿ, ಬೇಲೂರು-ಹಳೇಬೀಡು ವರೆಗೆ ತಮ್ಮ ಕಲೆ, ಕೌಶಲತೆ ಸಾರಿದ ಬಗ್ಗೆ ಅನೇಕ ಶಾಸನ, ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಜನಾಂಗದ ಶಿಲ್ಪಿಗಳ ಕೊಡುಗೆ ಅಪಾರವಾಗಿದ್ದು, ಜಕಣಾಚಾರಿ ಜನಸಾಮಾನ್ಯರ ಮನದಾಳದಲ್ಲಿ ಬೇರೂರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ’ ಎಂದು
ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಶಿಲ್ಪಿಗಳು ಕೇವಲ ವಿಗ್ರಹ ತಯಾರಕರಲ್ಲ. ಅವರು ನಾಡಿನ ಸಾಂಸ್ಕೃತಿಕ ರಾಯಭಾರಿಗಳು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಚಿನ್ನ–ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶಶಿಧರ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗರಾಜಚಾರ್, ಉಪಾಧ್ಯಕ್ಷ ಗೋವರ್ಧನಚಾರ್, ಮುಖಂಡ ಚಂದ್ರಚಾರ್, ವಿರೂಪಾಕ್ಷಚಾರ್, ಗೋಪಾಲಕೃಷ್ಣಚಾರ್, ಚೇತನ್, ಭಾಸ್ಕರ್, ಜಯಪ್ರಕಾಶ್, ಟಿ.ಎಚ್.ನವೀನ್, ಪ್ರಭಾಕರಚಾರ್, ನಾಗರಾಜಚಾರ್, ಶಂಕರಾಚಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.