ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಶಿಕ್ಷಕರ ಕ್ಷೇತ್ರ: 7,299 ಮತದಾರರು

Published 5 ಮೇ 2024, 6:05 IST
Last Updated 5 ಮೇ 2024, 6:05 IST
ಅಕ್ಷರ ಗಾತ್ರ

ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮತದಾರರ ಪಟ್ಟಿ ಪ್ರಕಟಿಸಿದ್ದು, ಜಿಲ್ಲೆಯಲ್ಲಿ 4,675 ಪುರುಷರು ಹಾಗೂ 2,624 ಮಹಿಳೆಯರು ಸೇರಿ ಒಟ್ಟು 7,299 ಮತದಾರರು ಇದ್ದಾರೆ.

ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ 750, ಮಧುಗಿರಿಯಲ್ಲಿ 501, ಶಿರಾ 752, ಚಿಕ್ಕನಾಯಕನಹಳ್ಳಿ 382, ತಿಪಟೂರು 549, ತುರುವೇಕೆರೆ 326, ಕುಣಿಗಲ್ 247, ಗುಬ್ಬಿ 461, ತುಮಕೂರು ನಗರ 2,313, ತುಮಕೂರು ಗ್ರಾಮಾಂತರ 692 ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 326 ಮಂದಿ ನೋಂದಾಯಿಸಿಕೊಂಡಿದ್ದಾರೆ.

ಶಿಕ್ಷಕ ಮತದಾರರು ತಮ್ಮ ಹೆಸರು ಸೇರಿಸಲು ಮೇ 6ರ ವರೆಗೆ ಅವಕಾಶ ನೀಡಲಾಗಿದೆ. ನಿಗದಿತ ಅರ್ಜಿ ನಮೂನೆ-19 ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲ್ಲೂಕು ನಿಯೋಜಿತ ಅಧಿಕಾರಿಗೆ ಸಲ್ಲಿಸಬಹುದು. ಅರ್ಹ ಶಿಕ್ಷಕರ ಹೆಸರು ಸೇರಿಸಿ ಮತದಾರರ ಪಟ್ಟಿ ಅಂತಿಮಗೊಳಿಸಲಾಗುತ್ತದೆ.

ಮತದಾನಕ್ಕಾಗಿ ಪಾವಗಡದ ತಾಲ್ಲೂಕು ಕಚೇರಿ ಸಭಾಂಗಣ ಮತ್ತು ಗ್ರೇಡ್‌–2 ತಹಶೀಲ್ದಾರ್‌ ಕಚೇರಿ, ಶಿರಾ ತಾಲ್ಲೂಕು ಕಚೇರಿ ಹಾಗೂ ತಾಲ್ಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣ, ಮಧುಗಿರಿಯ ಕೆ.ಆರ್‌.ಬಡಾವಣೆ ಸರ್ಕಾರಿ ಪ್ರೌಢಶಾಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿ ನ್ಯಾಯಾಲಯ ಸಭಾಂಗಣ, ತಿಪಟೂರು ತಾಲ್ಲೂಕು ಕಚೇರಿಯಲ್ಲಿ ತಲಾ 1 ಮತಗಟ್ಟೆ ಸ್ಥಾಪಿಸಲಾಗಿದೆ.

ತುರುವೇಕೆರೆ, ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ತುಮಕೂರು ತಾಲ್ಲೂಕು ಕಚೇರಿಗಳಲ್ಲಿ ತಲಾ 1, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡದಲ್ಲಿ 4 ಮತಗಟ್ಟೆ ಸೇರಿದಂತೆ ಒಟ್ಟು 16 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಮತದಾರರ ಪಟ್ಟಿ, ಮತಗಟ್ಟೆ ಸ್ಥಾಪನೆ, ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲಹೆ, ಸೂಚನೆ, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT