ತುಮಕೂರು: ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳು ನಮ್ಮ ಅರಿವು ವಿಸ್ತರಿಸುತ್ತವೆ ಎಂದು ಹಿರಿಯ ವಿಜ್ಞಾನಿ ಶಿವಾಜಿ ಜಾಧವ್ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಿಜ್ಞಾನ ಕಾಲೇಜಿನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ‘21ನೇ ಶತಮಾನದ ಜೈವಿಕಾಣುಶಾಸ್ತ್ರ: ಹೊಸ ಆವಿಷ್ಕಾರ ಮತ್ತು ಅನ್ವಯ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವೈಜ್ಞಾನಿಕ ಅನ್ವೇಷಣೆ ತಕ್ಷಣ ಯಶಸ್ಸು ನೀಡುವುದಿಲ್ಲ. ವೈಫಲ್ಯ ಮತ್ತು ಪ್ರತಿಕೂಲತೆಗಳು ಪ್ರಯಾಣದ ಒಂದು ಭಾಗವಾಗಿರುತ್ತವೆ. ನಿಜವಾದ ಜೈವಿಕಾಣುಶಾಸ್ತ್ರಜ್ಞನು ಸಹನ ಶೀಲತೆ, ಧೈರ್ಯ ಮತ್ತು ನಿರಂತರ ಪರಿಶ್ರಮದಿಂದ ಯಶಸ್ಸಿನತ್ತ ಮುನ್ನಡೆಯಬೇಕು. ಆಳವಾದ ಜ್ಞಾನ ಮತ್ತು ತಜ್ಞತೆ ದೀರ್ಘಕಾಲೀನ ಯಶಸ್ಸನ್ನು ನಿರ್ಧರಿಸುತ್ತವೆ. ತಂತ್ರಜ್ಞಾನದ ಕುರಿತು ಆಳವಾದ ತಿಳಿವಳಿಕೆ ಅನಿವಾರ್ಯ ಎಂದರು.

ಪ್ರಯೋಗಾಲಯ, ಸಂಶೋಧನಾ ಸಂಸ್ಥೆ, ಕೈಗಾರಿಕಾ ಅನ್ವಯಗಳಲ್ಲಿ ಅನುಭವ ಪಡೆಯುವುದು ಬಹಳ ಮುಖ್ಯ. ಜೈವಿಕಾಣುಶಾಸ್ತ್ರದಲ್ಲಿ ಆರ್ಥಿಕ ಬೆಳವಣಿಗೆಯೂ ಸಾಧ್ಯ. ಯಶಸ್ಸಿನ ಹಿಂದೆ ಓಡಬೇಡಿ, ಶ್ರೇಷ್ಠತೆಯ ಹಿಂದೆ ಹೋಗಿ, ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದು ಹೇಳಿದರು.

ಪ್ರಾಧ್ಯಾಪಕರಾದ ಎಸ್.ಶ್ರೀನಿವಾಸ, ಬಿ.ಆರ್.ಶಾಲಿನಿ, ರಶ್ಮಿ ಹೊಸಮನಿ, ಲಲಿತಾ, ಶಬೀನಾ ಅಂಜುಮ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.