ಮೈನವಿರೇಳಿಸಿದ ಭಕ್ತರ ಹರಕೆ

ಶುಕ್ರವಾರ, ಜೂಲೈ 19, 2019
23 °C
ದುರ್ಗಾ ಪರಮೇಶ್ವರಿ ದೇವಸ್ಥಾನ ಹಾಗೂ ಆದಿಶಕ್ತಿ ಜಾಡ್ರಾಳಮ್ಮ ದೇವಸ್ಥಾನದ 42ನೇ ವರ್ಷದ ಕರಗ ಮಹೋತ್ಸವ

ಮೈನವಿರೇಳಿಸಿದ ಭಕ್ತರ ಹರಕೆ

Published:
Updated:
Prajavani

ತುಮಕೂರು: ನಗರದ ಮರಳೂರು ದಿಣ್ಣೆ ಬಡಾವಣೆಯ 6ನೇ ಕ್ರಾಸ್‌ನಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನ ಹಾಗೂ ಆದಿಶಕ್ತಿ ಜಾಡ್ರಾಳಮ್ಮ ದೇವಸ್ಥಾನದ 42ನೇ ವರ್ಷದ ಕರಗ ಮಹೋತ್ಸವ ಬುಧವಾರ ಸಂಜೆ ನಡೆಯಿತು.

ಈ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ದೇಹಕ್ಕೆ ಹಾಕಿಕೊಂಡು ಹರಕೆ ತೀರಿಸಿದರು. ಈ ಬಾರಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಗೌರವಾಧ್ಯಕ್ಷ ಚಂದ್ರಣ್ಣ ಹಾಗೂ ಇಬ್ಬರು ಭಕ್ತರು ಶಕ್ತಿದೇವತೆ ಹಾಗೂ ಮುತ್ತು ಮಾರಿಯಮ್ಮನವರಿಗೆ ಕ್ರೇನ್ ಮೂಲಕ ಸಲ್ಲಿಸಿದ ಹರಕೆ ಭಕ್ತರಲ್ಲಿ ಮೈ ನವೀರೇಳಿಸಿತು.

ಬೆನ್ನಿಗೆ ಕೊಕ್ಕೆ ಹಾಕಿಕೊಂಡು ಕ್ರೇನ್ ಮೂಲಕ ಶಿವಶಕ್ತಿ ದಿಗ್ವಿಜಯ ಪೂಜೆ ಸಲ್ಲಿಸಿದರು. ಇದನ್ನು ಕಂಡ ಭಕ್ತರು ಒಂದು ಕ್ಷಣ ಬೆರಗಾದರು. ಹಿಂದಿನ ವರ್ಷಗಳಲ್ಲಿ ಬೆನ್ನಿಗೆ ಕೊಕ್ಕೆ ಹಾಕಿಕೊಂಡು ರಥವನ್ನು ಭಕ್ತರು ಎಳೆಯುತ್ತಿದ್ದರು. ಈ ವರ್ಷ ಕ್ರೇನ್ ಮೂಲಕ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದು ವಿಶೇಷವಾಗಿತ್ತು.

ತಮಿಳುನಾಡಿನ ಎಸ್.ಎಸ್.ಡಾ.ಸೆಲ್ವಂ ಕಲೈಮಾಮಣಿ ತಂಡವು ಚಂಡಿ ವಾದ್ಯ, ನಗರದ ತ್ಯಾಗು ತಂಡದಿಂದ ಕರಡಿ ವಾದನ ನುಡಿಸಿದವು. ವಿದ್ಯಾಗಣಪತಿ ಯುವಕರ ಜೀರ್ಣೋದ್ಧಾರ ಸೇವಾ ಸಮಿತಿ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !