ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇರಿತ ಪ್ರಕರಣ- ಸಹಚರರ ಬಂಧನಕ್ಕೆ ಲಿಂಗತ್ವ ಅಲ್ಪಸಂಖ್ಯಾತರ ಮನವಿ

Published 29 ಆಗಸ್ಟ್ 2024, 14:11 IST
Last Updated 29 ಆಗಸ್ಟ್ 2024, 14:11 IST
ಅಕ್ಷರ ಗಾತ್ರ

ಕುಣಿಗಲ್: ಪ್ರೇಮ ನಿರಾಕರಿಸಿದ ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಮೇಲಿನ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಸಹಚರರನ್ನು ಬಂಧಿಸಲು ಲಿಂಗತ್ವ ಅಲ್ಪಸಂಖ್ಯಾತರ ನಿಯೋಗ ಸಿಪಿಐ ನವೀನ್ ಗೌಡ ಅವರಿಗೆ ಗುರುವಾರ ಮನವಿ ಮಾಡಿದೆ.

ನಿಯೋಗದಲ್ಲಿದ್ದ ನಾಝಿಯಾ ಮಾತನಾಡಿ, ಹನೀಷಾ ಮೇಲಿನ ಕೊಲೆ ಪ್ರಯತ್ನವನ್ನು ಖಂಡಿಸಿ, ಈಗಾಗಲೇ ಆರೋಪಿ ಆದಿಲ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಕುಣಿಗಲ್ ಪೊಲೀಸರಿಗೆ ದೂರು ನೀಡಲಾಗಿತ್ತು. ಸಕಾಲದಲ್ಲಿ ಪೊಲೀಸರು ಗಮನ ಹರಿಸಿದ್ದರೆ ಘಟನೆ ನಡೆಯುತ್ತಿರಲಿಲ್ಲ. ಆರೋಪಿ ಆದಿಲ್ ಬಂಧನದ ಜತೆಗೆ ಅತನಿಗೆ ಸಹಕರಿಸಿದ ಸಹಚರರ ಮೇಲು ಪ್ರಕರಣ ದಾಖಲಿಸಲು ಮನವಿ ಮಾಡಿದರು.

ಕರೀನಾ, ಆರ್ಜೂ, ಸುಹಾನ್ ಹಾಜರಿದ್ದರು.

ಲಿಂಗತ್ವ ಅಲ್ಪಸಂಖ್ಯಾತ ಹನೀಷಾ ಅವರಿಗೆ ಚಾಕುವಿನಿಂದ ಇರಿದ ಆದಿಲ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅವರ ಕುಟುಂಬಕ್ಕೆ ರಕ್ಷಣೆ ನೀಡುವುದರ ಜೊತೆಗೆ ತನಿಖೆ ಮುಂದುವರೆಸಿದ್ದು, ಸಹಚರರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ನವೀನ್ ಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT