ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಚ್ಚಿದ ಡಯಟ್‌ಗೆ ಸಿಬ್ಬಂದಿ ಹೊರೆ

Published 11 ಜೂನ್ 2024, 6:04 IST
Last Updated 11 ಜೂನ್ 2024, 6:04 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮುಚ್ಚಿ ಒಂದು ದಶಕ ಕಳೆದಿದ್ದು, ಅಲ್ಲಿನ ಸಿಬ್ಬಂದಿಯೇ ಈಗ ಹೊರೆಯಾಗಿ ಪರಿಣಮಿಸಿದ್ದಾರೆ.

ಡಿಇಡಿ ಪ್ರವೇಶ ಪಡೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಂತೆ ನಿಧಾನವಾಗಿ ಕೋರ್ಸ್ ಮುಚ್ಚುವ ನಿರ್ಧಾರಕ್ಕೆ ಬರಲಾಯಿತು. ಕೊನೆಯದಾಗಿ 2014ರಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದನ್ನು ನಿಲ್ಲಿಸಲಾಯಿತು. ನಂತರ ಕೆಲವು ಉಪನ್ಯಾಸಕರನ್ನು ಇಲ್ಲಿಂದ ವರ್ಗಾವಣೆ ಮಾಡಿದ್ದರೂ ಇನ್ನೂ ಉಳಿದಿರುವ 30ಕ್ಕೂ ಹೆಚ್ಚು ಸಿಬ್ಬಂದಿ ಸಂಸ್ಥೆಯಲ್ಲೇ ಉಳಿದಿದ್ದಾರೆ.

ಒಬ್ಬರು ಪ್ರಾಂಶುಪಾಲರು, 6 ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಹಂತದ ಅಧಿಕಾರಿಗಳು, ಮುಖ್ಯ ಶಿಕ್ಷಕರ ಕೇಡರ್ ಹೊಂದಿರುವ 13 ಮಂದಿ, ವ್ಯವಸ್ಥಾಪಕರು 2, ಎಫ್‌ಡಿಎ 4, ಎಸ್‌ಡಿಎ 2, ಅಟೆಂಡರ್ 4 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಗಾಗ ಶಾಲೆಗಳಿಗೆ ಭೇಟಿ ನೀಡಿ ಬೋಧನೆಯ ಗುಣಮಟ್ಟ ಪರಿಶೀಲನೆ, ಶಿಕ್ಷಕರಿಗೆ ತರಬೇತಿ ನೀಡುವ ಕೆಲಸಕ್ಕೆ ಇಷ್ಟು ಸಿಬ್ಬಂದಿ ಸೀಮಿತರಾಗಿದ್ದಾರೆ. ಜತೆಗೆ ಬೆರಳಚ್ಚು, ಕಂಪ್ಯೂಟರ್, ಸಂಗೀತ, ಚಿತ್ರಕಲೆಯಂತಹ ಸಣ್ಣಪುಟ್ಟ ಪರೀಕ್ಷೆಗಳನ್ನು ನಡೆಸಿಕೊಡುತ್ತಾರೆ. ಹೊರೆ ಇಲ್ಲದ ಜವಾಬ್ದಾರಿ ನಿಭಾಯಿಸಲು ದೊಡ್ಡ ಸಿಬ್ಬಂದಿಯ ಹೊರೆಯನ್ನು ಡಯಟ್ ಸಂಸ್ಥೆ ಹೊರಬೇಕಾಗಿ ಬಂದಿದೆ. ಕಾರ್ಯಭಾರ ಇಲ್ಲದೆ ತಿಂಗಳಿಗೆ ಲಕ್ಷಾಂತರ ಹಾಗೂ ವರ್ಷಕ್ಕೆ ಕೋಟ್ಯಂತರ ರೂಪಾಯಿ ವೇತನ ನೀಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT