ಪ್ರಶಾಂತ್ ಕೆ.ಆರ್.

ತಿಪಟೂರು: ನಗರಸಭೆಯಿಂದ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಹಲವು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ವಿವಿಧ ಹಂತಗಳಲ್ಲಿ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ.

ಜನರು ಕಸ ಎಸೆಯುತ್ತಿದ್ದ ಸ್ಥಳಗಳನ್ನು ಗುರುತಿಸಿ, ಅಲ್ಲಿ ಸೌಂದರೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ.

ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಹಳೆಯ ಟೈರ್, ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ತ್ಯಾಜ್ಯ ಉಪಯೋಗಿಸಿ ಸ್ವಚ್ಛತೆ ಸಂದೇಶ ಸಾರುವ ಮಾದರಿ ರಚಿಸಲಾಗಿದೆ.

ರಂಗೋಲಿ ಹಾಗೂ ಭಿತ್ತಿ ಚಿತ್ರಗಳ ಮೂಲಕ ಸ್ವಚ್ಛತೆ, ಹಸಿ, ಒಣ ಕಸ ವಿಂಗಡಣೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕುರಿತು ಚಿತ್ರಾತ್ಮಕ ಸಂದೇಶಗಳನ್ನು ಮೂಡಿಸಲಾಗಿದೆ. ಸಮುದಾಯ ಪರಿವೀಕ್ಷಕರು, ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೂ ಗಮನ ಸೆಳೆಯುವ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಎಪಿಎಂಸಿ ಆವರಣದ ಪಕ್ಕ, ಕೋಟೆ ಪ್ರದೇಶ, ಸಾರ್ವಜನಿಕ ಆಸ್ಪತ್ರೆ ಹಿಂಭಾಗದ ವಾರ್ಡ್ ಸೇರಿದಂತೆ ಹಲವೆಡೆ ಕಸದ ರಾಶಿ ಹೆಚ್ಚಾಗುತ್ತಿದ್ದು, ಅಂತಹ ಸ್ಥಳಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ನಡೆಸಿ ಕಸ ವಿಲೇವಾರಿ ವ್ಯವಸ್ಥೆ ಬಲಪಡಿಸಲಾಗಿದೆ. ಸಮುದಾಯ ಪರಿವೀಕ್ಷಕರು, ಪೌರಕಾರ್ಮಿಕರು, ತ್ಯಾಜ್ಯ ಸಂಗ್ರಹಣಾ ವಾಹನಗಳ ಮೂಲಕ ನಿರಂತರ ಕಸ ಸಂಗ್ರಹಣೆಗೆ ನಗರಸಭೆ ಮುಂದಾಗಿದೆ.

ಹಸಿಕಸ ಹಾಗೂ ಒಣಕಸ ವಿಂಗಡಣೆಗೆ ಆದ್ಯತೆ ನೀಡಲಾಗಿದೆ. ಆದರೆ ಗಾಂಧಿನಗರ ಭಾಗದಲ್ಲಿ ಮಾಂಸ ತ್ಯಾಜ್ಯ ಸೇರಿದಂತೆ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ದಂಡ ವಿಧಿಸುವ ಜೊತೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಜನರು ನಿದ್ರೆಯಲ್ಲಿರುವಾಗಲೇ ಬೀದಿಗಳು ಸ್ವಚ್ಛವಾಗಲು ಪೌರಕಾರ್ಮಿಕರು ಶ್ರಮಿಸುತ್ತಿದ್ದು, ದುರ್ಗಂಧ, ದೂಳು, ಬಿಸಿಲು, ಮಳೆಯ ನಡುವೆಯೂ ಕೈಗೆ ಕೈಗವಸು ಧರಿಸಿ ಕಸದ ರಾಶಿಯಲ್ಲಿ ಕೈ ಹಾಕಿ ಅವರ ಶ್ರಮವು ನಮ್ಮ ದಿನದ ಶುಭಾರಂಭಕ್ಕೆ ಕಾರಣವಾಗಿವೆ. ಹಸಿ ಕಸದಿಂದ ಗೊಬ್ಬರವಾಗುತ್ತದೆ. ಒಣ ಕಸ ಮರುಬಳಕೆಗೆ ಹೋಗುತ್ತದೆ. ಈ ಸರಳ ಕ್ರಮಗಳು ಪರಿಸರವನ್ನು ಮಾತ್ರವಲ್ಲದೆ ಕಸ ಎತ್ತುವ ಕೈಗಳನ್ನೂ ರಕ್ಷಿಸುತ್ತವೆ. ನಮ್ಮ ಸಣ್ಣ ಜವಾಬ್ದಾರಿ, ಅವರ ದೊಡ್ಡ ನೋವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಪ್ರಜ್ಞಾವಂತರು.

ಸೃಜನಶೀಲತೆ ಹಾಗೂ ಪರಿಸರ ಕಾಳಜಿಯ ಸಂಯೋಜನೆಯ ಮೂಲಕ ‘ಸ್ವಚ್ಛ ತಿಪಟೂರು’ ನಿರ್ಮಾಣಕ್ಕೆ ಮುಂದಾಗಿರುವ ನಗರಸಭೆ ಕ್ರಮಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಂಗ್ರಹ ಸ್ಥಳಗಳ ಗುರುತು

ಕಸದ ವಾಹನಗಳು ಸಮಯಕ್ಕೆ ತಲುಪದ ಸಂದರ್ಭಗಳಲ್ಲಿ ಜನರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ಸ್ಥಳಗಳನ್ನು ಕಸ ಸಂಗ್ರಹಣಾ ಕೇಂದ್ರಗಳಾಗಿ ಗುರುತಿಸಿ ಎರಡು ಮೂರು ವಾರ್ಡ್ಗಳಿಗೆ ಒಂದೇ ಸ್ಥಳದಲ್ಲಿ ಕಸ ಇಡುವಂತೆ ಅರಿವು ಮೂಡಿಸಲಾಗುತ್ತಿದೆ. ವಿಶ್ವೇಶ್ವರ ಬದರಗಡೆ ಪೌರಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.