ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ವಿದ್ಯಾರ್ಥಿಗಳ ಮಹಿಳಾ ಪೋಷಕರಿಗೆ ಅಶ್ಲೀಲ ಸಂದೇಶ, ಶಿಕ್ಷಕ ಅಮಾನತು

Last Updated 28 ಜೂನ್ 2022, 12:48 IST
ಅಕ್ಷರ ಗಾತ್ರ

ತುಮಕೂರು: ವಿದ್ಯಾರ್ಥಿಗಳ ಮಹಿಳಾ ಪೋಷಕರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ಮಧುಗಿರಿ ತಾಲ್ಲೂಕು ದೊಡ್ಡಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕ ಎಂ.ಸುರೇಶ್ ಅವರನ್ನು ಡಿಡಿಪಿಐ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ವ್ಯಾಸಂಗ ದೃಢೀಕರಣ ಪತ್ರ ಸೇರಿದಂತೆ ಇನ್ನಿತರೆ ಕೆಲಸಗಳಿಗಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಲುಗೆಯಿಂದ ವರ್ತಿಸಿ ಅವರ ಮೊಬೈಲ್ ಸಂಖ್ಯೆ ಪಡೆದುಕೊಂಡು ನಂತರ ಅಶ್ಲೀಲವಾಗಿ ಎಸ್ಎಂಎಸ್, ವಿಡಿಯೊ ಕಳುಹಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಮಾತನಾಡಿಸುವ ನೆಪದಲ್ಲಿ ಕರೆ ಮಾಡಿ ಅವರ ತಾಯಂದಿರ ಬಳಿ ಅಶ್ಲೀಲವಾಗಿ ಮಾತನಾಡುತ್ತಿದ್ದರು.

ರಾಜಕೀಯವಾಗಿ ಸಹಾಯ ಮಾಡುತ್ತೇನೆಂದು ಗ್ರಾಮದ ಯುವಕರನ್ನು ಪುಸಲಾಯಿಸಿ ಸಂಜೆ ವೇಳೆ ಕರೆಸಿಕೊಂಡು ಅವರ ಜತೆ ಮದ್ಯಪಾನ ಮಾಡುತ್ತಿದ್ದರು. ನಗದು ವಹಿ ಅಸಮರ್ಪಕ ನಿರ್ವಹಣೆ, ಶಾಲಾ ಅನುದಾನ ದುರ್ಬಳಕೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಶಾಸಕರು ಕರೆದಿದ್ದಾರೆ ಎಂಬ ನೆಪ ಹೇಳಿಕೊಂಡು ಅನಧಿಕೃತವಾಗಿ ಗೈರಾಗುವುದು, ಶಾಲೆಗೆ ತಡವಾಗಿ ಬಂದು, ಬೇಗ ಹೊರಟು ಹೋಗುತ್ತಾರೆ. ಗ್ರಾಮದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಡಿಡಿಪಿಐಗೆ ಒಂದು ತಿಂಗಳ ಹಿಂದೆಯೇ ದೂರು ಸಲ್ಲಿಸಿದ್ದರು.

ಗ್ರಾಮಸ್ಥರ ದೂರಿನ ಬಗ್ಗೆ ತನಿಖೆ ನಡೆಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಡಿಡಿಪಿಐಗೆ ವರದಿ ಸಲ್ಲಿಸಿದ್ದರು. ಗ್ರಾಮಸ್ಥರು ಮಾಡಿರುವ ಆರೋಪಗಳು ಮೇಲು ನೋಟಕ್ಕೆ ನೈಜವೆಂದು ಕಂಡು ಬಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ವರದಿಯ ಆಧಾರದ ಮೇಲೆ ಡಿಡಿಪಿಐ ಎಂ.ರೇವಣಸಿದ್ದಪ್ಪ ಅಮಾನತು ಮಾಡಿ ಸೋಮವಾರ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT