ತುರುವೇಕೆರೆ: ಬೌದ್ಧಿಕ ಹಾಗೂ ಜ್ಞಾನ ವಿಕಾಸ ಕೇಂದ್ರಗಳಾದ ಗ್ರಂಥಾಲಯಗಳಲ್ಲಿ ಕುಳಿತು ಓದುವ ಸದಭಿರುಚಿಯನ್ನು ಮಕ್ಕಳಲ್ಲಿ ಪೋಷಕರು ಬೆಳೆಸಬೇಕು ಎಂದು ಚಿದಂಬರ ಉಚಿತ ಗ್ರಂಥಾಲಯದ ಸ್ಥಾಪಕ ರಾಮಚಂದ್ರು ಹೇಳಿದರು.

ಪಟ್ಟಣದ ಜೆ.ಪಿ.ಶಾಲಾ ಆವರಣದಲ್ಲಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

ಭೌದ್ಧಿಕ ಸಾಮರ್ಥ್ಯದ ಹೆಚ್ಚಳದೊಂದಿಗೆ ಬಹಳಷ್ಟು ದೇಶಗಳು ಇಂದು ಪ್ರಗತಿಪಥದಲ್ಲಿವೆ. ದೇಶದ ಪ್ರಭುತ್ವ ಸಾಂಸ್ಕೃತಿಕ ಹಿರಿಮೆ, ಇತಿಹಾಸ, ಹಿರಿಯರ ಅನುಭವಗಳು ನೈಜ ಘಟನೆಗಳು ಭವಿಷ್ಯತ್ತಿನ ಜನರಿಗೆ ಮಾರ್ಗದರ್ಶಿಯಾಗಲಿದೆ ಎಂದರು.

ಆಡಳಿತಾಧಿಕಾರಿ ಟಿ.ಬಿ.ಮಂಜುನಾಥ ಮಾತನಾಡಿ, 2500ಕ್ಕೂ ಹೆಚ್ಚಿನ ಉತ್ತಮ ಗ್ರಂಥಗಳು, ಜ್ಞಾನಾರ್ಜನೆಯ ವೈಜ್ಞಾನಿಕ ವಿಸ್ಮಯಗಳ ಅಡಕದ ಪುಸ್ತಕಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇದರ ಸದುಪಯೋಗದೊಂದಿಗೆ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಗೆಳೆಯರ ಬಳಗದ ಅಧ್ಯಕ್ಷರಾದ ಜಿ.ಆರ್.ರಂಗೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಮಂಡಳಿಯ ಪ್ರಕಾಶ್‍ಗುಪ್ತ, ಲಕ್ಷ್ಮಿನಾರಾಯಣ್, ತಿರುಮಲಯ್ಯ, ಜಯಮ್ಮಶಿವಶೇಖರೇಗೌಡ, ಶಿವಲೀಲಜಯರಾಮಯ್ಯ, ಮುಖ್ಯೋಪಾಧ್ಯಾಯ ತುಕಾರಾಂ, ಪ್ರಕಾಶ್, ಮಹಾಲಕ್ಷ್ಮಿ, ಪ್ರದೀಪ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.