ಶುಕ್ರವಾರ, ಅಕ್ಟೋಬರ್ 22, 2021
21 °C
ಗ್ರಾಹಕರೊಂದಿಗೆ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಲೋಕೇಶ್‌ ಸಭೆ

ತುರುವೇಕೆರೆ: ವಿದ್ಯುತ್ ಬಿಲ್ ಸಮಸ್ಯೆಗೆ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ವಿದ್ಯುತ್ ಬಿಲ್ ವ್ಯತ್ಯಾಸವಾಗಿರುವ ಬಗ್ಗೆ ಗ್ರಾಹಕರು ಮನವಿ ನೀಡಿದ್ದ ಕಾರಣ, ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಲೋಕೇಶ್‌ ಅವರು ಇಲ್ಲಿನ ಬೆಸ್ಕಾಂ ಇಲಾಖೆಗೆ ಭೇಟಿ ನೀಡಿ, ಗ್ರಾಹಕರ ಸಮಸ್ಯೆ  ಆಲಿಸಿದರು.

ಪಟ್ಟಣದ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಹಕರ ಸಂಧಾನ ಸಭೆಯಲ್ಲಿ ಅವರು ಮಾತನಾಡಿದ ಅವರು, ಪ್ರತಿ ತಿಂಗಳು ಓಡಿದ ರೀಡಿಂಗ್ ಪ್ರಮಾಣವನ್ನು ನಿಗದಿತ ಸಮಯದಲ್ಲಿ ಬರೆಯದ ಕಾರಣ ಒಮ್ಮೆಲೆ ಪಟ್ಟಣದ ಸುಮಾರು 676 ಗ್ರಾಹಕರಿಗೆ ₹92 ಲಕ್ಷ ಬಿಲ್ ಬಂದಿರುವುದು ಗ್ರಾಹಕರಿಗೆ ಹೊರೆಯಾಗಿದೆ ಎಂದರು.

ಗ್ರಾಹಕರಿಗೆ ಹೊರೆಯಾಗದೆ, ಇತ್ತ ಇಲಾಖೆಗೂ ನಷ್ಟವಾಗದ ರೀತಿಯಲ್ಲಿ ಇಲಾಖೆ ಕೂಲಂಕಷವಾಗಿ ಪರಿಶೀಲಿಸಿ ಇದೀಗ ₹47.35 ಲಕ್ಷ ಮಾತ್ರ ಪಾವತಿಸುವಂತೆ ಗ್ರಾಹಕರಲ್ಲಿ ಮನವಿ ಮಾಡಿದರು.

ಮುಂದೆ ಈ ರೀತಿಯ ತಪ್ಪಾಗದಂತೆ ಇಲಾಖೆ ಎಚ್ಚರಿಕೆ ವಹಿಸಲಿದ್ದು, ಗ್ರಾಹಕರು ಪರಿಶೀಲನೆಗೊಂಡ ಬಿಲ್ ಮೊತ್ತವನ್ನು ಪಾವತಿ ಮಾಡುವ ಮೂಲಕ ಸಹಕರಿಸಬೇಕು ಎಂದರು.

ಎಇಇ ಚಂದ್ರನಾಯಕ್ ಮಾತನಾಡಿ, ಈಗಾಗಲೇ ಬಂದಿರುವ ₹92 ಲಕ್ಷ ಬಿಲ್ ಮೊತ್ತದಲ್ಲಿ ಶೇ 50ರಷ್ಟನ್ನು ಕಡಿತ ಮಾಡಿದ್ದು, ಉಳಿದ ಹಣವನ್ನು ವಿವಿಧ ಹಂತದಲ್ಲಿ ನಿಗದಿತ ಸಮಯದೊಳಗೆ ಗ್ರಾಹಕರು ಪಾವತಿಸುವ ಮೂಲಕ ಸಹಕರಿಸಬೇಕು ಎಂದು ಮನವಿ
ಮಾಡಿದರು.

ಪ.ಪಂ.ಅಧ್ಯಕ್ಷ ಅಂಜನ್ ಕುಮಾರ್, ಸದಸ್ಯರಾದ ಎನ್.ಆರ್.ಸುರೇಶ್, ಆಶಾ ರಾಜಶೇಖರ್, ಮಧು, ಚಿದಾನಂದ್, ನದೀಂ, ಉಪಲೆಕ್ಕ ನಿಯಂತ್ರಣಾಧಿಕಾರಿ ಚಂದ್ರು, ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ ಗೌಡ, ಲೆಕ್ಕಾಧಿಕಾರಿ ಕುಮಾರಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಅಸ್ಲಾಂಪಾಷಾ, ಸುರೇಶ್, ಸತೀಶ್, ವೆಂಕಟೇಶ್, ಗಂಗಾಧರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು