ಮಂಗಳವಾರ, ಮೇ 17, 2022
26 °C

ಕೊರಟಗೆರೆ: ದಾಖಲೆ ಹೊರಗೆಸೆದರು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ಲಾಟರಿ ಮೂಲಕ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿ ಚುನಾವಣಾ ದಾಖಲೆಗಳನ್ನು ಕಚೇರಿಯಿಂದ ಹೊರಗೆ ಎಸೆದ ಘಟನೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಅರಸಾಪುರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಆಯ್ಕೆ ಚುನಾವಣೆ ಸಂದರ್ಭದಲ್ಲಿ ಇಬ್ಬರು ಆಕಾಂಕ್ಷಿಗಳು ಅಧ್ಯಕ್ಷ ಗಾದಿ ಕಣದಲ್ಲಿದ್ದರು. ಫೆ.6ರಂದು ಅಧ್ಯಕ್ಷ ಆಯ್ಕೆಗೆ ದಿನ ನಿಗದಿಯಾಗಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮಕೃಷ್ಣಯ್ಯ ಹಾಗೂ ಜೆಡಿಎಸ್
ಬೆಂಬಲಿತ ಅಭ್ಯರ್ಥಿ ಲಿಂಗಪ್ಪ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 17 ಜನ ಸದಸ್ಯ ಬಲದಲ್ಲಿ ಚುನಾವಣಾ ಪ್ರಕ್ರಿಯೆ ನಡೆದು ಒಟ್ಟು 16 ಮತ ಚಲಾವಣೆಯಾಗುವ ಮೂಲಕ ಇಬ್ಬರಿಗೂ 8 ಸಮಬಲದ ಮತ ಹಾಕಲಾಗಿತ್ತು.

ಈ ಹಿನ್ನೆಯಲ್ಲಿ ಚುನಾವಣಾ ಅಧಿಕಾರಿಗಳಾಗಿದ್ದ ಸುಧಾಕರ್ ಅವರು ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ ಮಾಡಲು ತೀರ್ಮಾನಿಸಿ ಪ್ರಕ್ರಿಯೆ ಪ್ರಾರಂಭಿಸಿದರು. ರಾಮಕೃಷ್ಣಯ್ಯ ಅವರ ಹೆಸರು ಬಂದಿದ್ದರಿಂದ ಚುನಾವಣಾ ಅಧಿಕಾರಿಗಳು ಅವರನ್ನೇ ಅಧ್ಯಕ್ಷ ಎಂದು ಘೋಷಣೆ ಮಾಡಿದರು. ಇದರಿಂದ ಸಿಟ್ಟಾದ ಅಭ್ಯರ್ಥಿ ಲಿಂಗಪ್ಪ ಹಾಗೂ ಅವರ ಬೆಂಬಲಿಗರು ಮತಪತ್ರ, ಸಹಿ ಸ್ವೀಕೃತಿ, ಸಭಾ ನಡವಳಿ ಇತರೆ ದಾಖಲೆಗಳನ್ನು ಕಚೇರಿಯಿಂದ ಹೊರಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪುಟ್ಟಮ್ಮ 9 ಮತ ಹಾಗೂ ಸಿದ್ದಗಂಗಮ್ಮ 7 ಮತ ಪಡೆದಿ ದ್ದರಿಂದ ಪುಟ್ಟಮ್ಮ ಅವರನ್ನು ಉಪಾಧ್ಯಕ್ಷರಾಗಿ ಘೋಷಣೆ ಮಾಡಲಾಯಿತು.

ಸ್ಥಳಕ್ಕೆ ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಸಿಪಿಐ ಎಫ್.ಕೆ.ನಧಾಪ್, ಪಿಎಸೈ ಎಚ್.ಮುತ್ತುರಾಜು ಭೇಟಿ ನೀಡಿದರು.

ಪಿಡಿಒ ಪವಿತ್ರಾ, ಕಾರ್ಯದರ್ಶಿ ನರಸರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು