ಶುಕ್ರವಾರ, ಜುಲೈ 23, 2021
23 °C

ಮದ್ಯಕ್ಕೆ ಹಣ ನೀಡಲಿಲ್ಲವೆಂದು ತಂದೆ ಹತ್ಯೆ ಮಾಡಿದ ಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂದು ಆಕ್ರೋಶಗೊಂಡ ಪಟ್ಟಣದ ಮಾರುತಿ ನಗರದ ವೆಂಕಟಪ್ಪ (35) ಎಂಬಾತ ಶುಕ್ರವಾರ ರಾತ್ರಿ ತನ್ನ ತಂದೆ ಸಣ್ಣಯ್ಯ (62) ಅವರನ್ನೇ ಹತ್ಯೆ ಮಾಡಿದ್ದಾನೆ.

ಸಣ್ಣಯ್ಯ ಕೂಲಿ ಕೆಲಸ ಮಾಡುತ್ತಿದ್ದರು. ವೆಂಕಟಪ್ಪ ಲಾರಿ ಚಾಲಕನಾಗಿದ್ದ. ಸಣ್ಣಯ್ಯ ಅವರ ಜತೆ ಪದೇ ಪದೇ ವೆಂಕಟಪ್ಪ ಜಗಳವಾಡುತ್ತಿದ್ದ. ಇದರಿಂದ ಬೇಸರಗೊಂಡ ಆತನ ತಾಯಿ ಮತ್ತೊಬ್ಬರ ಮನೆಗೆ ಮಲಗಲು ತೆರಳಿದ್ದರು.

ನನಗೆ ಮದುವೆ ಮಾಡಲಿಲ್ಲ ಎಂದು ವೆಂಕಟಪ್ಪ ಜಗಳ ತೆಗೆದಿದ್ದು ನಂತರ ಕುಡಿಯಲು ಹಣ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹುಣೆಸೆಹಣ್ಣು ಬಿಡಿಸುವ ಮರದ ತುಂಡಿನಿಂದ ತಂದೆಯ ತಲೆಗೆ ಬಲವಾಗಿ ಹೊಡೆದು ಸಾಯಿಸಿದ್ದಾನೆ. ಬೆಳಿಗ್ಗೆ ಪಕ್ಕದ ಮನೆಯವರು ಸಣ್ಣಯ್ಯ ಅವರ ಪತ್ನಿ ತಾಯಮ್ಮ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಆರೋಪಿಯನ್ನು ಪಟ್ಟಣದ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಯಮ್ಮ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಮಿಕ ಸಾವು

ಕುಣಿಗಲ್: ಪಟ್ಟಣದಲ್ಲಿ ನಿರ್ಮಾಣ ಹಂತದ ಹೋಟೆಲ್‌ನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಸುಂದರ್ ರಾಜು (38) ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ.

ಸುಂದರ್ ರಾಜು ಮದ್ದೂರು ತಾಲ್ಲೂಕು ಸೋಮನಹಳ್ಳಿಯವರು. ಅಮೃತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.