ತುಮಕೂರು: ಜಿಲ್ಲೆಯಲ್ಲಿ 176 ಜನಪದ ಕಲಾ ಪ್ರಕಾರಗಳಿವೆ. ಓದಲು, ಬರೆಯಲು ಬಾರದವರ ಸಾಹಿತ್ಯ ಭಂಡಾರ ಜನಪದ ಸಾಹಿತ್ಯ ಎಂದು ಜಾನಪದ ಕಲಾವಿದ ಸಣ್ಣಹೊನ್ನಯ್ಯ ಕಂಟಲಗೆರೆ ಹೇಳಿದರು.

ತಾಲ್ಲೂಕಿನ ನಾಗವಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯ ಪರಿಷತ್ತಿನ ನಡೆ– ಯುವ ಜನತೆಯ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ‘ಪರಿಷತ್ತು ಕನ್ನಡ ಭಾಷೆ ಮತ್ತು ಇತಿಹಾಸವ ತಿಳಿಸುವ ಕಾರ್ಯ ಮಾಡುತ್ತಿದೆ. ಇದರ ಉದ್ದೇಶವನ್ನು ಯುವ ಸಮೂಹ ಅರ್ಥ ಮಾಡಿಕೊಳ್ಳಬೇಕು. ಸಾಹಿತ್ಯ ಪ್ರಕಾರದಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೂಳೂರು ಹೋಬಳಿಯ ಅಧ್ಯಕ್ಷರಾಗಿ ತೋಪಯ್ಯ, ಹೆಬ್ಬೂರು ಹೋಬಳಿ ಅಧ್ಯಕ್ಷರಾಗಿ ವಾಸು ಅವರನ್ನು ನೇಮಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಎಸ್.ಸಿದ್ಧರಾಜು, ಸಾಹಿತ್ಯ ಪರಿಷತ್ತಿನ ಶಶಿಕುಮಾರ್, ದೇವರಾಜು, ಪ್ರಕಾಶ್, ರಾಜಶೇಖರ್, ಸಂಪತ್ ಕುಮಾರ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.