ಮಂಗಳವಾರ, ಮಾರ್ಚ್ 21, 2023
20 °C
ಬ್ರಹ್ಮಸಮುದ್ರ ಗ್ರಂಥಾಲಯದಲ್ಲಿ ಪೀಠೋಪಕರಣಗಳ ಕೊರತೆ

ಚೀಲದಲ್ಲಿವೆ ನೂರಾರು ಪುಸ್ತಕಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ಐಡಿಹಳ್ಳಿ ಹೋಬಳಿಯ ಬ್ರಹ್ಮಸಮುದ್ರದ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಜೋಡಿಸಿಡಲು ಪೀಠೋಪಕರಣಗಳ ಕೊರತೆಯಿಂದ ನೂರಾರು ಪುಸ್ತಕಗಳನ್ನು ಚೀಲಗಳಲ್ಲಿ ತುಂಬಿಡಲಾಗಿದೆ ಎಂದು ಓದುಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ರಹ್ಮಸಮುದ್ರ ಬೆಟ್ಟ-ಗುಡ್ಡಗಳ ಸಮೀಪದಲ್ಲಿರು ವುದರಿಂದ ಇಲ್ಲಿಗೆ ಯಾವುದೇ ಮೊಬೈಲ್‌ ನೆಟ್ವರ್ಕ್ ಸಿಗುವುದಿಲ್ಲ. ಹಾಗಾಗಿ ಗ್ರಾಮದ ಬಹುತೇಕರು ದಿನಪತ್ರಿಕೆ, ಪುಸ್ತಕಗಳನ್ನು ಓದಲು ಗ್ರಂಥಾಲಯವನ್ನು ಅವಲಂಬಿಸಿದ್ದಾರೆ.
ಗ್ರಂಥಾಲಯದ ಮೇಲ್ವಿಚಾರಕ ಎಂ.ವಿ. ರಾಘವೇಂದ್ರ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲದಿದ್ದರೂ ಸುಮಾರು 12 ವರ್ಷಗಳಿಂದ 1 ಕಿ.ಮೀ ದೂರವಿರುವ ಬ್ರಹ್ಮಸಮುದ್ರ ಗೇಟ್‌ವರೆಗೂ ಹೋಗಿ ಬಸ್‌ಗಳಿಂದ ಪತ್ರಿಕೆ ಪಡೆದು ಓದುಗರಿಗೆ ಒದಗಿಸುತ್ತಾರೆ. ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳ ಜೊತೆಗೆ ಪ್ರತಿ ದಿನ ತರಿಸುವ ಪತ್ರಿಕೆಗಳನ್ನು ಗ್ರಂಥಾಲಯ ಕೊಠಡಿಯಲ್ಲಿ
ಇರುವ ಪೀಠೋಪಕರಣದಲ್ಲೇ ಅಂದವಾಗಿ ಓದುಗರ ಮನ ಸೆಳೆಯುವಂತೆ
ಜೋಡಿಸಿಟ್ಟಿದ್ದಾರೆ.

ಹಲವಾರು ಪುಸ್ತಕಗಳನ್ನು ಜೋಡಿಸಿಡಲು ರ‍್ಯಾಕ್‌ಗಳ ವ್ಯವಸ್ಥೆ ಇಲ್ಲದೇ ಅನಿವಾರ್ಯವಾಗಿ ಚೀಲದಲ್ಲಿ ಇಡಲಾಗಿದೆ. ಪಂಚಾಯಿತಿ ಹಾಗೂ ಗ್ರಂಥಾಲಯ ಇಲಾಖೆಯವರು ಪುಸ್ತಕ ಜೋಡಿಸಿಡಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲು ರ‍್ಯಾಕ್‌, ತೆರೆದ ಕಪಾಟು ಮತ್ತು ಅಲ್ಮೆರಾ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಬ್ರಹ್ಮಸಮುದ್ರದ ಎಂ.ಜಿ.ನಾಗರಾಜು, ಬಿ.ಎಲ್. ದೇವರಾಜು, ಬಿ.ಎಸ್. ಮಮತಾಕ್ಷಿ, ಬಿ.ಎಸ್.ಸಿದ್ದಲಿಂಗಯ್ಯ, ರಮೇಶ್, ಮಂಜುನಾಥ್ ರಾವ್ ಮನವಿ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.