ಸಮಯ ಪಾಲಿಸದ ಸರ್ಕಾರಿ ಬಸ್: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗ ಸಂಚಾರ ವ್ಯತ್ಯಯ
ಮಂಜುನಾಥ್
Published : 18 ಫೆಬ್ರುವರಿ 2026, 6:27 IST
Last Updated : 18 ಫೆಬ್ರುವರಿ 2026, 6:27 IST
ADVERTISEMENT
ಫಾಲೋ ಮಾಡಿ
Comments
ಡಿಪೊದಿಂದ ಹೊರಬರುವುದು ತಡ ಬೆಳಿಗ್ಗೆ ನಿಗದಿತ ಸಮಯಕ್ಕೆ ಬಸ್ ಸಂಚರಿಸಿದರೆ ಅನುಕೂಲವಾಗುತ್ತದೆ. ಡಿಪೊದಿಂದ ಬಸ್‌ಗಳು ತಡವಾಗಿ ಹೊರಬರುತ್ತಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ ಎಂದು ಚಾಲಕರು ಮತ್ತು ನಿರ್ವಾಹಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಮೂರು ಬಸ್‌ಗಳು ಏಕಕಾಲಕ್ಕೆ ಚಲಿಸುವುದರಿಂದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.
ಮಹಮದ್ ಹುಸೇನ್ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಟ್ರೇಡ್ ಯೂನಿಯನ್ ಜಂಟಿ ಕಾರ್ಯದರ್ಶಿ
ಚ್ಚುವರಿ ನಿಲುಗಡೆಗೆ ಒತ್ತಾಯ ಕೇದಿಗೇಹಳ್ಳಿಯಲ್ಲಿ ಬಸ್ ನಿಲ್ದಾಣ ದೂರವಿರುವುದರಿಂದ ಅಲ್ಲಿಗೆ ತಲುಪಲು ತೊಂದರೆಯಾಗುತ್ತಿದೆ. ಇಲ್ಲಿ ಆಟೊಗಳನ್ನು ನಿಲ್ಲಿಸುವುದಿಲ್ಲ. ಶಕ್ತಿ ಯೋಜನೆ ಜಾರಿಯಾಗುವ ಮೊದಲು ಎರಡು ಕಡೆ ಬಸ್‌ಗಳು ನಿಲುಗಡೆಯಾಗುತ್ತಿದ್ದವು. ಆದರೆ ಈಗ ಕೇವಲ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಮಾತ್ರ ಬಸ್ ನಿಲ್ಲಿಸಲಾಗುತ್ತಿದೆ. ಇದರಿಂದ ಅನಾನುಕೂಲವಾಗುತ್ತಿದ್ದು ಹೆಚ್ಚುವರಿ ನಿಲುಗಡೆಗೆ ಕ್ರಮವಹಿಸಬೇಕು.
ಲಕ್ಷ್ಮೀಶ ಕೇದಿಗೆಹಳ್ಳಿ ನಿವಾಸಿ
ಹೆಸಾರಿಗೆ ನಿಯಂತ್ರಕರ ಭರವಸೆ ಸಾರಿಗೆ ಸಮಸ್ಯೆ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಅಪರೂಪಕ್ಕೊಮ್ಮೆ ಇಂತಹ ಸಮಸ್ಯೆಯಾಗುತ್ತಿದ್ದು ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂದು ಸಾರಿಗೆ ನಿಯಂತ್ರಕರು ಭರವಸೆ ನೀಡಿದ್ದಾರೆ.