ಬುಧವಾರ, ಸೆಪ್ಟೆಂಬರ್ 18, 2019
22 °C

ಬಾಗುವಾಳದಲ್ಲಿ ಮೇವು ಬ್ಯಾಂಕ್ ಆರಂಭ

Published:
Updated:
Prajavani

ತಿಪಟೂರು: ತಾಲ್ಲೂಕಿನಲ್ಲಿ ಮೊದಲ ಹಂತವಾಗಿ ಬಾಗುವಾಳು ಮುನಿಯಪ್ಪ ಆಲದಮರ ಪ್ರದೇಶದಲ್ಲಿ ಮೇವು ಬ್ಯಾಂಕ್ ಆರಂಭಿಸಲಾಯಿತು.

ತಹಶೀಲ್ದಾರ್ ಬಿ. ಆರತಿ ಮೇವು ವಿತರಣೆಗೆ ಚಾಲನೆ ನೀಡಿ ಮಾತನಾಡಿ, ತಾಲ್ಲೂಕಿನಲ್ಲಿ ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿರುವ ಹೊನ್ನವಳ್ಳಿ ಹೋಬಳಿಗೆ ವಿಶೇಷ ಗಮನ ಕೊಡಲಾಗಿದೆ. ಮೊದಲ ಹಂತದಲ್ಲಿ ಇಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಿ ಪ್ರತಿ ಜಾನುವಾರಿಗೆ 5 ಕೆ.ಜಿ ಒಣ ಹುಲ್ಲನ್ನು ನೀಡಲಾಗುತ್ತಿದೆ. 15 ದಿನಗಳಿಗೆ ಆಗುವಷ್ಟು ಮೇವನ್ನು ಒಂದೇ ಬಾರಿಗೆ ನೀಡಲಾಗುತ್ತದೆ. ಪ್ರತಿ ಹೋಬಳಿಯಲ್ಲಿ ಕನಿಷ್ಠ ಎರಡು ಕಡೆ ಕಡೆ ಮೇವು ಬ್ಯಾಂಕ್‍ ತೆರೆಯಲಾಗುತ್ತದೆ. ಈಗಾಗಲೇ ತಾಲ್ಲೂಕಿನ ಎಲ್ಲ ಪಶು ಆಸ್ಪತ್ರೆಗಳಲ್ಲಿ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದೆ ಎಂದರು.

ಮೇವು ಬ್ಯಾಂಕ್ ಸಮರ್ಪಕವಾಗಿ ನಡೆಯಲು ರೈತರು ಸಹಕರಿಸಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಬರದ ಹಿನ್ನೆಲೆಯಲ್ಲಿ ರೈತರಿಗೆ ನೆರವಾಗಬೇಕು ಎಂದು ತಿಳಿಸಿದರು.

ಪಶು ಸಂಗೋಪನೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

Post Comments (+)