ಮಾಜಿ ಕಾರ್ಪೊರೇಟರ್ ಕುಟುಂಬ ನಾಪತ್ತೆ
ಪರಿಶಿಷ್ಟ ಮಹಿಳೆಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಮಾಜಿ ಕಾರ್ಪೊರೇಟರ್‌ಗಳಾದ ಇಂದ್ರಕುಮಾರ್ ನಳಿನಾ ಇಂದ್ರಕುಮಾರ್ ಪುತ್ರ ಯಶಸ್ವಿ ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದಾರೆ. ‘ಯಶಸ್ವಿ ಈಗಾಗಲೇ ನನ್ನನ್ನು ಮದುವೆಯಾಗಿ ಮತ್ತೊಂದು ಯುವತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆಗೂ ಸಿದ್ಧತೆ ನಡೆಸಿದ್ದಾರೆ’ ಎಂದು ಸರ್ಕಾರಿ ಉದ್ಯೋಗಿಯೊಬ್ಬರು ದೂರು ನೀಡಿದ್ದರು. ಈ ಕುರಿತು ಸೆ. 1ರಂದು ಮಹಿಳಾ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ‘ಪ್ರಕರಣ ಡಿಸಿಆರ್‌ಇ ಠಾಣೆಗೆ ವರ್ಗಾವಣೆಯಾಗಿದೆ. ಪ್ರಕರಣ ದಾಖಲಾದ ನಂತರ ಮೂವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಅವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಡಿಸಿಆರ್‌ಇ ಡಿವೈಎಸ್‌ಪಿ ದಿವಾಕರ್ ಪ್ರತಿಕ್ರಿಯಿಸಿದರು.