ದಂಡಿನಶಿವರಕ್ಕೆ ಅಂಬೇಡ್ಕರ್ ವಸತಿ ಶಾಲೆ ಮಂಜೂರಾಗಿದ್ದು ಸ್ವಂತ ಕಟ್ಟಡವಿಲ್ಲ. ಸಮುದಾಯ ಭವನದಲ್ಲಿ ಶಾಲೆ ನಡೆಯುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕು
ದಂಡಿನಶಿವರ ಕುಮಾರ್ ಮುಖಂಡ
ತುಮಕೂರು ನಗರದ ಕಾಲೊನಿ ನಿವಾಸಿಗಳಿಗೆ ಅಗತ್ಯ ದಾಖಲೆ ನೀರು ಒದಗಿಸಬೇಕು. ಸಮುದಾಯದ ಭವನ ನಿರ್ಮಿಸಬೇಕು. ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಸಮರ್ಪಕವಾಗಿ ಬಳಕೆಯಾಗಬೇಕು
ಅರುಣ್ ಮುಖಂಡ ಸ್ಲಂ ಸಮಿತಿ
ಚಿಕ್ಕನಾಯಕನಹಳ್ಳಿಯಲ್ಲಿ ಅಂಬೇಡ್ಕರ್ ಭವನ ವಾಲ್ಮೀಕಿ ಭವನ ನಿರ್ಮಾಣ ಕಾರ್ಯ ಮುಗಿಯುತ್ತಿಲ್ಲ. ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ ಲ್ಯಾಪ್‌ಟಾಪ್ ವಿತರಿಸಬೇಕು
ಸಿಂಗದಹಳ್ಳಿ ರಾಜಕುಮಾರ್ ಮುಖಂಡ
ಮರು ತನಿಖೆ
ಕುಣಿಗಲ್ ತಾಲ್ಲೂಕಿನ ಹೊಸಪುರ ಗ್ರಾಮದಲ್ಲಿ 19 ಜನ ಫಲಾನುಭವಿಗಳಿಗೆ 4 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಇದರಲ್ಲಿ ದಲಿತರಿಗೆ ವಂಚಿಸಿ 4 ಮಂದಿ ಸವರ್ಣೀಯರಿಗೆ ಇಡೀ ಜಮೀನು ನೀಡಲಾಗಿದೆ. ಈ ಬಗ್ಗೆ 2013ರಲ್ಲಿ ಆಯೋಗಕ್ಕೂ ದೂರು ನೀಡಿದ್ದು ಪ್ರಯೋಜನವಾಗಿಲ್ಲ. ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ರಾಮಲಿಂಗಯ್ಯ ಪ್ರಸ್ತಾಪಿಸಿದರು. ಪ್ರಕರಣದ ಕುರಿತು ಮತ್ತೊಮ್ಮೆ ತನಿಖೆ ನಡೆಸಲಾಗುವುದು. ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಆಯೋಗದ ಅಧ್ಯಕ್ಷ ಎಲ್.ಮೂರ್ತಿ ಭರವಸೆ ನೀಡಿದರು.
300 ಪ್ರಕರಣ ಇತ್ಯರ್ಥ
ಕಳೆದ 5 ತಿಂಗಳ ಅವಧಿಯಲ್ಲಿ ಆಯೋಗದಲ್ಲಿ ಬಾಕಿ ಇದ್ದ 3850 ಪ್ರಕರಣ ಪೈಕಿ 300 ಪ್ರಕರಣ ಇತ್ಯರ್ಥ ಪಡಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಎಲ್.ಮೂರ್ತಿ ಹೇಳಿದರು. ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಪರಿಶಿಷ್ಟರಿಗೆ ರುದ್ರಭೂಮಿ ಸಿಕ್ಕಿಲ್ಲ. ಸ್ಮಶಾನಕ್ಕೆ ರಸ್ತೆ ಕಾಂಪೌಂಡ್ ಮಾಡಿಲ್ಲ. ಎಲ್ಲ ಗ್ರಾಮಕ್ಕೆ ರುದ್ರಭೂಮಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ಬಾಕಿ ಉಳಿಸಿಕೊಂಡ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.