ಬುಧವಾರ, ಜೂನ್ 23, 2021
28 °C

ತುಮಕೂರು: ಕೋವಿಡ್‌ನಿಂದ 18 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೋವಿಡ್‌–19ನಿಂದ ಸಾವನ್ನಪ್ಪುವವರ ಸಂಖ್ಯೆ ಏರುತ್ತಲೇ ಇದ್ದು, ಜಿಲ್ಲೆಯಲ್ಲಿ ಬುಧವಾರ 18 ಮಂದಿ ಮೃತಪಟ್ಟಿದ್ದರು. ಮಂಗಳವಾರ 16 ಜನರು ಸಾವು ಕಂಡಿದ್ದರು.

ಕಳೆದ ಎರಡು ವಾರದಿಂದಲೂ ಪ್ರತಿ ದಿನವೂ ಹತ್ತಕ್ಕೂ ಹೆಚ್ಚು ಜನರು ಸಾಯುತ್ತಲೇ ಇದ್ದಾರೆ. ಸೋಂಕಿತರ ಸಂಖ್ಯೆಯೂ ಕಡಿಮೆಯಾಗುತ್ತಿಲ್ಲ.

ತುಮಕೂರು ತಾಲ್ಲೂಕಿನಲ್ಲಿ 7, ಕೊರಟಗೆರೆ 4, ತುರುವೇಕೆರೆ, ಗುಬ್ಬಿ, ಮಧುಗಿರಿ ತಾಲ್ಲೂಕಿನಲ್ಲಿ ತಲಾ 2, ಪಾವಗಡ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ತಾಲ್ಲೂಕುವಾರು ವಿವರ: ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 719, ಚಿಕ್ಕನಾಯಕನಹಳ್ಳಿ 165, ಗುಬ್ಬಿ 262, ಕೊರಟಗೆರೆ 257, ಕುಣಿಗಲ್ 182, ಮಧುಗಿರಿ 322, ಪಾವಗಡ 299, ಶಿರಾ 263, ತಿಪಟೂರು 110, ತುರುವೇಕೆರೆ ತಾಲ್ಲೂಕಿನಲ್ಲಿ 79 ಮಂದಿಗೆ ಸೋಂಕು ದೃಢಪಟ್ಟಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು