ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ದಸರಾ ಕ್ರೀಡಾಕೂಟಕ್ಕೆ ತೆರೆ

Published : 27 ಸೆಪ್ಟೆಂಬರ್ 2024, 14:24 IST
Last Updated : 27 ಸೆಪ್ಟೆಂಬರ್ 2024, 14:24 IST
ಫಾಲೋ ಮಾಡಿ
Comments

ತುಮಕೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಶುಕ್ರವಾರ ತೆರೆ ಬಿತ್ತು. ಮಹಿಳೆಯರ ವಿಭಾಗದ 100 ಮೀಟರ್‌, 400 ಮೀಟರ್‌ ಓಟದಲ್ಲಿ ಆರ್‌.ವೈ.ಭೂಮಿಕಾ, 1,500 ಮೀಟರ್‌ ಮತ್ತು 3 ಸಾವಿರ ಮೀಟರ್‌ ಓಟದಲ್ಲಿ ಮಹಾದೇವಿ ಮೊದಲ ಸ್ಥಾನ ಪಡೆದರು.

ವಿವಿಧ ಸ್ಪರ್ಧೆಗಳ ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು.

100 ಮೀಟರ್ ಓಟ- ಆರ್‌.ವೈ.ಭೂಮಿಕಾ, ಎಸ್‌.ಆರ್‌.ಶಿವಾನಿ, ಪ್ರಾಪ್ತಿ. 200 ಮೀಟರ್- ಎಸ್‌.ಆರ್‌.ಶಿವಾನಿ, ಎಚ್.ಸಂಧ್ಯಾ, ಪ್ರತೀಕ್ಷಾ. 400 ಮೀಟರ್- ಆರ್‌.ವೈ.ಭೂಮಿಕಾ, ಪ್ರತೀಕ್ಷಾ, ಬಿಂದು. 800 ಮೀಟರ್– ಭೀಮಾ ಬಾಯಿ, ಎ.ಜಿ.ಅರ್ಚನಾ, ಸಾನ್ವಿತಾ. 1,500 ಮೀಟರ್- ಮಹಾದೇವಿ, ಭೀಮಾಬಾಯಿ, ಎಚ್‌.ತೇಜಸ್ವಿನಿ. 3 ಸಾವಿರ ಮೀಟರ್- ಮಹಾದೇವಿ, ಸಾಯಿದ ಆಲಿಯಾ ಶೇಖ್‌, ಜ್ಹೋಯ ಶೇಖ್‌.

ಉದ್ದ ಜಿಗಿತ- ಪ್ರಾಪ್ತಿ, ಹರ್ಷಿಕಾ, ಟಿ.ಎಂ.ಪ್ರೀತಿ. ಎತ್ತರ ಜಿಗಿತ- ಕವನ, ಎಚ್‌.ಸಿ.ಅನುಷಾ, ಆರ್‌.ಚೈತ್ರಾ. ಗುಂಡು ಎಸೆತ- ಹಿತಶ್ರೀ, ಜಯಶ್ರೀ, ಎಚ್‌.ವಿ.ರಕ್ಷಿತಾ. ತ್ರಿವಿಧ ಜಿಗಿತ- ಎಂ.ಶ್ರೇಯಾ, ಟಿ.ಕೆ.ಅರುಣಾ, ನಾಗವೇಣಿ. ಭರ್ಜಿ ಎಸೆತ- ಕೆ.ಸುಷ್ಮಾ, ಪಿ.ಕೆ.ಸಹನಾ, ಮಹಾಲಕ್ಷ್ಮಿ. ತಟ್ಟೆ ಎಸೆತ– ಆರ್‌.ಪುಷ್ಪಾ, ಜಯಶ್ರೀ, ಎಚ್‌.ಬಿ.ಅನುಷಾ. 110 ಮೀಟರ್ ಹರ್ಡಲ್ಸ್- ಪ್ರಾಪ್ತಿ, ಕವನ, ತ್ರಿಶಾ.

4X100 ಮೀಟರ್ ರಿಲೇ ಓಟದಲ್ಲಿ ಎಸ್‌.ಶಿವಾನಿ ರೈ ಅವರ ತಂಡ ಪ್ರಥಮ, ಪ್ರೀತಿ ಮತ್ತು ತಂಡ ದ್ವಿತೀಯ ಸ್ಥಾನ ಪಡೆಯಿತು. 4X400 ಮೀಟರ್ ರಿಲೇ ಓಟದಲ್ಲಿ ಮಹಾದೇವಿ, ಜಿ.ಎಲ್‌.ನಾಗವೇಣಿ ತಂಡ ಪ್ರಶಸ್ತಿ ಜಯಿಸಿತು. ಹರ್ಷಿತಾ ಅವರ ತಂಡ ಎರಡನೇ ಬಹುಮಾನಕ್ಕೆ ಭಾಜನವಾಯಿತು.

ಗುಂಪು ಸ್ಪರ್ಧೆ: ಕಬಡ್ಡಿ ಫೈನಲ್‌ ಪಂದ್ಯದಲ್ಲಿ ಗುಬ್ಬಿ ಮತ್ತು ತುಮಕೂರು ತಂಡಗಳ ಮಧ್ಯೆ ಪೈಪೋಟಿ ಜೋರಾಗಿತ್ತು. ಗುಬ್ಬಿ ತಂಡ ಪ್ರಶಸ್ತಿ ಜಯಿಸಿತು. ವಾಲಿಬಾಲ್‌ನಲ್ಲಿ ತುಮಕೂರು ಪ್ರಥಮ, ಗುಬ್ಬಿ ದ್ವಿತೀಯ ಸ್ಥಾನ ಪಡೆಯಿತು. ಥ್ರೋಬಾಲ್‌ ವಿಭಾಗದಲ್ಲಿ ತಿಪಟೂರು, ತುಮಕೂರು ತಂಡಗಳು ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದವು.

ಹ್ಯಾಂಡ್‌ಬಾಲ್‌ ಸ್ಪರ್ಧೆಯಲ್ಲಿ ತುರುವೇಕೆರೆ ಪ್ರಥಮ, ತುಮಕೂರು ದ್ವಿತೀಯ ಸ್ಥಾನಕ್ಕೆ ಭಾಜನವಾಯಿತು. ಕೊಕ್ಕೊ ಅಂತಿಮ ಪಂದ್ಯದಲ್ಲಿ ಗುಬ್ಬಿ–ತುಮಕೂರು ತಂಡಗಳು ಮುಖಾಮುಖಿಯಾದವು. ಗುಬ್ಬಿಯ ಆಟಗಾರ್ತಿಯರು ಪಂದ್ಯ ಗೆದ್ದು ಸಂಭ್ರಮಿಸಿದರು.

ದಸರಾ ಕ್ರೀಡಾಕೂಟದಲ್ಲಿ ಜಿಗಿತದ ಒಂದು ಭಂಗಿ
ದಸರಾ ಕ್ರೀಡಾಕೂಟದಲ್ಲಿ ಜಿಗಿತದ ಒಂದು ಭಂಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT