ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಅನುಷ್ಠಾನದಿಂದ ತುಮಕೂರು ಜಿಲ್ಲೆ ಸಮೃದ್ಧಿ: ಟಿ.ಬಿ. ಜಯಚಂದ್ರ ಅಭಿಪ್ರಾಯ

ಬನುಮಯ್ಯ ಜಯಂತಿಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯ
Last Updated 2 ಆಗಸ್ಟ್ 2021, 2:03 IST
ಅಕ್ಷರ ಗಾತ್ರ

ಮಧುಗಿರಿ: ಡಿ.ಬನುಮಯ್ಯ ಅವರ ಜಯಂತಿ ಜಾತಿಗೆ ಸೀಮಿತವಾಗಬೇಕಿಲ್ಲ. ಎಲ್ಲರೂ ಆಚರಿಸುವಂತಾಗಲಿ ಎಂದು ಹೊಸದುರ್ಗ ಕುಂಚಿಟಿಗರ ಮಹಾಸಂಸ್ಥಾನ ಮಠದ ಅಧ್ಯಕ್ಷ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಸಿಪಿಸಿ ಆವರಣದಲ್ಲಿ ರಾವ್ ಬಹದ್ದೂರು ಧರ್ಮಪ್ರಕಾಶ್ ಡಿ.ಬನು
ಮಯ್ಯ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಬನುಮಯ್ಯ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ಜಾತಿಗಳನ್ನು ಒಪ್ಪಿಕೊಳ್ಳುವ ಹಾಗೂ ಅಪ್ಪಿಕೊಳ್ಳುವ ಮೂಲಕ ಜಾತ್ಯತೀತರಾಗಿದ್ದರು. ಜಿಲ್ಲೆ ಶಾಶ್ವತ ಬರಗಾಲದಿಂದ ತತ್ತರಿಸುತ್ತಿದ್ದು, ಜಿಲ್ಲೆಯಲ್ಲಿ ಡಾ.ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್ ರಾಜಣ್ಣ ಅವರಿಗೆ ಅಧಿಕಾರ ನೀಡಿದರೆ ನೀರಾವರಿ ಯೋಜನೆ ಅನುಷ್ಠಾನಗೊಂಡು ರೈತರ ಬದುಕು ಹಸನಾಗುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಬ್ಯಾಂಕ್ ಮೂಲಕ ರೈತರ ಹಾಗೂ ಬಡವರ ಪರವಾದ ಕೆಲಸ ಮಾಡುತ್ತಿದ್ದಾರೆ. ಕುಂಚಿಟಿಗ ಸಮು
ದಾಯ ಸೇರಿದಂತೆ ಅನೇಕ ವರ್ಗದ ಜನ
ರಿಗೆ ಉದ್ಯೋಗ ನೀಡಿದ್ದಾರೆ ಎಂದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಮೇಕೆದಾಟು ಯೋಜನೆ ಜಾರಿಯಾದರೆ ಜಿಲ್ಲೆಯ ರೈತರು ಸಮೃದ್ಧಿಯಾಗಿರುತ್ತಾರೆ. ಈ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ಎತ್ತಿನಹೊಳೆ ಯೋಜನೆ ಕಾಮಗಾರಿ ವಿಳಂಬವಾಗುತ್ತಿದ್ದು, ಕಾಮಗಾರಿ ಶೀಘ್ರ ನಡೆದು ಕೆರೆಗಳಿಗೆ ನೀರು ಹರಿಸಬೇಕು. ರೈತರ ಬದುಕು ಹಸನಾಗಲು ಸಹಕಾರ ಕ್ಷೇತ್ರ ಮುಖ್ಯ. ರೈತರಿಗೆ ಸಾಲ- ಸೌಲಭ್ಯ ಕಲ್ಪಿಸುವ ಕಾರ್ಯವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಡಿ.ಬನುಮಯ್ಯ ಅವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ತತ್ವ- ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ರೈತರು ಆರ್ಥಿಕವಾಗಿ ಸದೃಢರಾಗಲು ವಾಣಿಜ್ಯ ಬೆಳೆ ಬೆಳೆಯುವುದು ಮುಖ್ಯ ಎಂದರು.

‘ನಾನು ಮತ್ತು ಜಯಚಂದ್ರ ಅವರು ಜನರ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾದರೆ, ಎರಡು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಬದ್ಧ. ನಾನು ಶಾಸಕನಾಗಿದ್ದಾಗ ಜನಪರ ಕಾರ್ಯ ಮಾಡಿರುವ ತೃಪ್ತಿಯಿದೆ’ ಎಂದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಕೃಷಿ ವಿಜ್ಞಾನಿ ಡಾ.ವಸಂತಕುಮಾರ್, ರಾಜ್ಯ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಮಿಡತರಹಳ್ಳಿ ಮಂಗಳಮ್ಮ ಮಾತನಾಡಿದರು.

ರಾಷ್ಟ್ರೀಯ ಕ್ರಿಬ್ಕೊ ನಿರ್ದೇಶಕ ಆರ್.ರಾಜೇಂದ್ರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ಬಿ.ನಾಗೇಶ್ ಬಾಬು, ಜಿ.ಎನ್.ಮೂರ್ತಿ, ಜಿ.ಎಸ್.ರವಿ, ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುವರ್ಣಮ್ಮ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಎಸ್.ಆರ್.ರಾಜಗೋಪಾಲ್, ಪುರಸಭೆ ಸದಸ್ಯ ಲಾಲಾಪೇಟೆ ಮಂಜುನಾಥ್, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಮಹ
ಮದ್ ಅಯೂಬ್, ಮುಖಂಡರಾದ ಆದಿನಾರಾಯಣ ರೆಡ್ಡಿ, ಪಿ.ಸಿ.ಕೃಷ್ಣಾರೆಡ್ಡಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಿ.ಎನ್.ನಾಗಾರ್ಜುನ, ಹೊನ್ನಾಪುರ ದೀಪಕ್, ಡಿ.ಬಿ.ಆಶಾ, ಅಪ್ಪುಗೌಡ, ಮಲ್ಲೇಗೌಡ, ಬಂದ್ರೇಹಳ್ಳಿ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT