ಗುರುವಾರ , ಫೆಬ್ರವರಿ 20, 2020
27 °C

ನೀರಿನಲ್ಲಿ ಮುಳುಗಿ ಇಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರಟಗೆರೆ: ಕೆರೆಯಲ್ಲಿ ಸೊಪ್ಪು ತೊಳೆಯಲು ಹೋಗಿದ್ದ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ಧರ್ಮಪ್ರಕಾಶ್(35) ಹಾಗೂ ತುಮಕೂರು ತಾಲ್ಲೂಕು ಅಯ್ಯನಗುಡಿ ಗೊಲ್ಲಹಳ್ಳಿಯ ನಾಗರಾಜು(36) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಧರ್ಮಪ್ರಕಾಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಸೊಪ್ಪನ್ನು ಮಾರಾಟ ಮಾಡುವ ಮುನ್ನ ನೀರಿನಲ್ಲಿ ತೊಳೆಯುವ ಸಲುವಾಗಿ ಸ್ನೇಹಿತ ನಾಗರಾಜುನನ್ನು ಕರೆದು ಕೊಂಡು ಥರಟಿ ಕೆರೆಗೆ ಹೋಗಿದ್ದಾರೆ. ಕೆರೆ ದಡದಲ್ಲಿ ಸೊಪ್ಪು ತೊಳೆಯುವಾಗ ಎರಡು ಕಟ್ಟು ಸೊಪ್ಪು ನೀರಿನಲ್ಲಿ ತೇಲಿಕೊಂಡು ಹೋಗಿದೆ. ಅದನ್ನು ತೆಗೆದುಕೊಳ್ಳಲು ಹೋದ ಈಜು ಬರದ ಧರ್ಮಪ್ರಕಾಶ್ ಮೊದಲು ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಸ್ನೇಹಿತ ನಾಗರಾಜು ರಕ್ಷಿಸಲು ಹೋಗಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಸಿಪಿಐ ಎಫ್.ಕೆ.ನದಾಫ್, ಪಿಎಸ್‌ಐ ಬಿ.ಸಿ.ಮಂಜುನಾಥ ಭೇಟಿ ನೀಡಿದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು