ಸೋಮವಾರ, ಸೆಪ್ಟೆಂಬರ್ 27, 2021
25 °C

ನ್ಯಾಯಾಲಯಗಳ ಆದೇಶದ ಪ್ರತಿಗಳನ್ನು ಕನ್ನಡದಲ್ಲಿಯೂ ನೀಡಲು ವಿಜಯಸೇನೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನ್ಯಾಯಾಲಯಗಳ ಆದೇಶದ ಪ್ರತಿಗಳನ್ನು ಕನ್ನಡದಲ್ಲಿಯೂ ನೀಡಬೇಕು ಎಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ನ್ಯಾಯಾಲಯ
ಗಳಲ್ಲಿ ಕನ್ನಡ ಅನುಷ್ಠಾನಗೊಳಿಸಬೇಕು ಎಂಬ ವಿಚಾರವನ್ನು ಇಟ್ಟುಕೊಂಡು ರಾಜ್ಯದಾದ್ಯಂತ ‘ಮನವಿ ಅಭಿಯಾನ’ ಹಮ್ಮಿಕೊಂಡಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸು.ಪಿ.ಸುಧೀರ್ ತಿಳಿಸಿದರು.

ನ್ಯಾಯಾಲಯಗಳಲ್ಲಿ ನೀಡುವ ಆದೇಶ, ತೀರ್ಪುಗಳ ಪ್ರತಿಗಳು ಇಂಗ್ಲಿಷ್‌ನಲ್ಲಿ ಇರುತ್ತವೆ. ಇದರಿಂದ ಜನಸಾಮಾನ್ಯರು, ರೈತರು, ಇತರರಿಗೆ ತುಂಬಾ ತೊಂದರೆಯಾಗುತ್ತಿದೆ. ಆದೇಶದ ಪ್ರತಿಗಳಲ್ಲಿ ಇರುವಂತಹ ವಿಚಾರಗಳು ಏನು ಎಂಬುದೇ ತಿಳಿಯದೆ ಬೇರೆಯವರ ಹತ್ತಿರ ಓದಿಸಿ ತಿಳಿಯಬೇಕಾದ ಪ್ರಸಂಗ ಬಂದಿದೆ. ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ನೀಡುವಂತಹ ಆದೇಶದ ಪ್ರತಿಗಳನ್ನು ಮಾತೃಭಾಷೆ ಕನ್ನಡದಲ್ಲೂ ನೀಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಯನ್ನು ಅನುಷ್ಠಾನಕ್ಕೆ ತರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಸೇನೆ ಜಿಲ್ಲಾ ಗೌರವಾಧ್ಯಕ್ಷ ಬಿ.ಬಿ.ಮಹದೇವಯ್ಯ ಹೇಳಿದರು.

ಕರುನಾಡ ವಿಜಯಸೇನೆ ಪದಾಧಿಕಾರಿಗಳಾದ ಅನಿಲ್ ನಾಯಕ್, ಸುಧಾಕರ್ ರಾವ್, ಎ.ಜಿ.ಹರೀಶ್, ಸಾಲೋಮನ್ ವಿಕ್ಟರ್, ಜಗದೀಶ್, ಜಿ.ರವೀಶ್, ಸಂದೀಪ್, ಸುಧಾಕರ್, ಸಿದ್ದೇಶ್, ದೀಕ್ಷಿತ್, ಯಾಸ್ಮಿನ್ ತಾಜ್, ಮಂಜುಳಾರಾಮ್, ವರಮಹಾಲಕ್ಷ್ಮಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು