ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ, ಪಕ್ಷಿಗಳಿಗಿಲ್ಲ ನೀರಿನ ಬರ; ಕಲ್ಯಾಣಿಯಲ್ಲಿ ಕೋತಿಗಳ ಈಜಿನ ಮೋಜಾಟ

ಸಿದ್ಧಗಂಗಾಮಠದಲ್ಲೂ ನೀರಿನ ಬರ
Last Updated 19 ಮೇ 2019, 12:09 IST
ಅಕ್ಷರ ಗಾತ್ರ

ತುಮಕೂರು: ನಾಡಿನ ಪ್ರವಾಸಿ ಕ್ಷೇತ್ರಗಳಲ್ಲೊಂದಾದ ಇಲ್ಲಿನ ಸಿದ್ಧಗಂಗಾಮಠದಲ್ಲೂ ಈ ವರ್ಷ ಪ್ರತಿ ವರ್ಷಕ್ಕಿಂತ ನೀರಿನ ಬರಹೆಚ್ಚಾಗಿದೆ.

ಆದರೆ, ಮಠದ ಪಕ್ಕ ಇರುವ ಸಿದ್ಧಲಿಂಗೇಶ್ವರ ದೇವಸ್ಥಾನ ಇರುವ ಬೆಟ್ಟದಲ್ಲಿರುವ ಕೋತಿ, ಪಕ್ಷಿ ಪ್ರಾಣಿಗಳಿಗೆ ನೀರಿನ ಅಭಾವ ಆಗದ ರೀತಿ ಮಠದ ಆಡಳಿತ ಮಂಡಳಿಯು ಮಠದ ಆವರಣದಲ್ಲಿರುವ ಕಲ್ಯಾಣಿ, ಹೊಂಡಗಳಿಗೆ ನೀರು ತುಂಬಿಸಿದೆ.

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ನೂರಾರು ಕೋತಿಗಳು ಇವುಗಳಿ ಜಿಗಿದು ಗಂಟೆಗಟ್ಟಲೆ ಕಲ್ಯಾಣಿ, ಹೊಂಡದಲ್ಲಿ ಈಜುತ್ತ ನೀರಾಟ, ಕಚ್ಚಾಟ, ಚೇಷ್ಟೆಗಳಲ್ಲಿಯೇ ಕಾಲ ಕಳೆಯುತ್ತಿವೆ. ಈ ಕೋತಿಗಳನ್ನು ಕಂಡ ಜನರು ಖುಷಿ ಪಡುತ್ತಿದ್ದಾರೆ. ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿಯುವುದು ಭಾನುವಾರ ಕಂಡು ಬಂದಿತು.

ನೀರಲ್ಲಿ ಮುಳುಗುವುದು, ಮೇಲಿನಿಂದ ಜಿಗಿಯುವುದು, ಒಂದು ಕೋತಿ ಮೇಲೆ ಹತ್ತಲು ಹೋದರೆ ಇನ್ನೊಂದು ಕೋತಿ ಅದರ ಬಾಲ ಹಿಡಿದು ಕೆಳಗೆ ಬೀಳಿಸುವುದು ಹೀಗೆ ಹತ್ತಾರು ದೃಶ್ಯಗಳು ಕಂಡು ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT