ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಧುಗಿರಿ: ಸಾಹಿತಿ ಕವಿತಾ ಕೃಷ್ಣ ಸ್ಮರಣೆ

Published 17 ಫೆಬ್ರುವರಿ 2024, 13:36 IST
Last Updated 17 ಫೆಬ್ರುವರಿ 2024, 13:36 IST
ಅಕ್ಷರ ಗಾತ್ರ

ಮಧುಗಿರಿ: ಸಾಹಿತಿ ಕವಿತಾ ಕೃಷ್ಣ ಅವರು 250ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿದೆ ಎಂದು ಸಾಹಿತಿ ಮಲನ ಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಾಹಿತಿ ಕವಿತಾ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಸಾಹಿತಿ ಕವಿತಾ ಕೃಷ್ಣ ಅವರು ರಚಿಸಿರುವ ಸಾಹಿತ್ಯ ಕೃತಿಗಳು, ಕವಿಯ ಸಾರ್ವಕಾಲಿಕ ಜೀವಂತ ಧ್ವನಿ, ಸಾಮಾಜಿಕ, ಸಾಂಸ್ಕೃತಿಕವಾಗಿ ಆಯಾ ಕಾಲದ ಜನರ ನಾಡಿ ಮಿಡಿತವಾಗಿ ಮತ್ತು ಅಶೋತ್ತರಗಳ ಮಿಡಿತವಾಗಿ ಎಲ್ಲ ಕಾಲದೊಂದಿಗೆ ಸಂವಾದ ಮಾಡುತ್ತಲೇ ಇರುತ್ತವೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ನಿರ್ದೇಶಕರಾದ ರಕೀಬ್ ಸಾಬ್, ಎಂ.ವಿ. ಮೂಡ್ಲಿಗಿರೀಶ್, ಶಿವಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT