ಕುಣಿಗಲ್: ಪಟ್ಟಣ ಸಮೀಪದ ರಂಗಸ್ವಾಮಿ ಬೆಟ್ಟಕ್ಕೆ ಮಂಗಳವಾರ ಅಪ್ರಾಪ್ತೆಯೊಂದಿಗೆ ತೆರಳಿದ್ದ ಯುವಕ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಟ್ಟಣದ ಆಶ್ರಯ ಕಾಲೊನಿಯ ರಂಗನಾಥ (21) ಮೃತರು. ಅಪ್ರಾಪ್ತ ಸ್ನೇಹಿತೆಯೊಂದಿಗೆ ಬೆಟ್ಟಕ್ಕೆ ತೆರಳಿದ್ದರು. ಆಕೆಯ ಜತೆಗೆ ಚರ್ಚೆಯ ನಂತರ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಅಪ್ರಾಪ್ತೆ ಗಾಬರಿಗೊಂಡು ಯುವಕನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ನೇಹಿತರು ಮರದಿಂದ ಕೆಳಗೆ ಬಿದ್ದಿದ್ದ ರಂಗನಾಥರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ತರುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ರಂಗನಾಥರ ತಂದೆ ಪುಟ್ಟಸ್ವಾಮಯ್ಯ ನೀಡಿದ ದೂರಿನ ಮೇರೆಗೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.