ಚಿಕ್ಕನಾಯಕನಹಳ್ಳಿ: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಹಂದನಕೆರೆ ದಲಿತ ಕಾಲೊನಿ ಮಹಿಳೆಯರು ಗುರುವಾರ ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಯಮ್ಮ ಮಾತನಾಡಿ ಹಂದನಕೆರೆಯಲ್ಲಿ ಒಟ್ಟು 11 ಸಿಸ್ಟನ್ ಅಳವಡಿಸಲಾಗಿದೆ. ಆದರೆ 500 ಜನಸಂಖ್ಯೆ ಇರುವ ದಲಿತ ಕಾಲೊನಿಯಲ್ಲಿ ಒಂದೂ ಕಾಣಿಸುವುದಿಲ್ಲ. ಕಾಲೊನಿ ಮಹಿಳೆಯರು ರಸ್ತೆ ಬದಿ ಸಿಸ್ಟನ್ ಬಳಿ ರಾತ್ರಿಯೆಲ್ಲಾ ಖಾಲಿ ಕೊಡ ಹಿಡಿದು ನೀರಿಗಾಗಿ ಕಾಯಬೇಕಾದ ಸ್ಥಿತಿ ಇದೆ ಎಂದು ಅಲವತ್ತುಕೊಂಡರು.

ಗ್ರಾಮದಲ್ಲಿ 10 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ರಾತ್ರಿ ಇಡಿ ಕಾದರೂ 4 ಕೊಡ ನೀರು ಸಿಗುವುದಿಲ್ಲ ಎಂದು ಗೃಹಿಣಿ ಗಂಗಮ್ಮ ಹೇಳಿದರು. ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಕಳೆದ ತಿಂಗಳು ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರ ಸಮಸ್ಯೆ ಆಲಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಯ್ಯ, 8 ಸಾವಿರ ಜನರಿರುವ ಗ್ರಾಮದಲ್ಲಿ 2 ಕೊಳವೆ ಬಾವಿ ಹಾಗೂ 3 ಕೈಪಂಪ್ ಕೆಲಸ ಮಾಡುತ್ತಿವೆ. ಹೀಗಾಗಿ ಸದ್ಯ10ದಿನಕ್ಕೆ ಒಮ್ಮೆ ನೀರು ಬಿಡಲಾಗುತ್ತಿದೆ. 15 ದಿನದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಮಹಿಳೆಯರು ಪ್ರತಿಭಟನೆ ಹಿಂಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.