ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೇ 5ರಂದು ಚುನಾವಣಾ ಪ್ರಚಾರಕ್ಕೆ ಬರುತ್ತಿರುವುದರಿಂದ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ.

ಪ್ರಧಾನಿ ಭೇಟಿ ಪ್ರಯುಕ್ತ ಕೇಂದ್ರದ ವಿಶೇಷ ರಕ್ಷಣಾ ತಂಡ (ಎಸ್ಪಿಜಿ) ಸಮಾರಂಭ ನಡೆಯುವ ಸ್ಥಳ, ವಿಶ್ವವಿದ್ಯಾನಿಲಯದ ಆವರಣದಲ್ಲಿನ ಹೆಲಿಪ್ಯಾಡ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸುಪರ್ದಿಗೆ ಪಡೆದಿದ್ದಾರೆ.

ಗುರುವಾರ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕೇಂದ್ರದ ವಿಶೇಷ ರಕ್ಷಣಾ ತಂಡದ (ಎಸ್ಪಿಜಿ) ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ನಡೆಸಿದರು. ಮೆಟಲ್ ಡಿಟೆಕ್ಟರ್ ಉಪಕರಣದಿಂದ ವೇದಿಕೆ, ಸಭಿಕರಿಗೆ ಆಸನಗಳನ್ನು ಹಾಕುವ ಸ್ಥಳ, ಕ್ರೀಡಾಂಗಣದ ರಕ್ಷಣಾ ಗೋಡೆ ಸೇರಿದಂತೆ ಎಲ್ಲ ಕಡೆ ಪರಿಶೀಲನೆ ನಡೆಸಿದರು.

ಕ್ರೀಡಾಂಗಣದ ಮುಂದಿನ ರಸ್ತೆ, ವಿಶ್ವವಿದ್ಯಾನಿಲಯದ ಹೆಲಿಪ್ಯಾಡ್ ಇರುವ ಪ್ರದೇಶದಲ್ಲೂ ಪರಿಶೀಲನೆ ನಡೆಸಿದರು. ಹೆಲಿಪ್ಯಾಡ್‌ನಿಂದ ಪ್ರಧಾನಿ ಸಮಾರಂಭ ನಡೆಯುವ ಸ್ಥಳಕ್ಕೆ ಬರುವ ಮಾರ್ಗ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯ ಗೋಪಿನಾಥ್ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ, ಸಾರ್ವಜನಿಕರಿಗೆ ಕ್ರೀಡಾಂಗಣದಲ್ಲಿ ಪ್ರವೇಶಕ್ಕೆ ಎಲ್ಲೆಲ್ಲಿ ಮಾರ್ಗ ಕಲ್ಪಿಸಬೇಕು, ವಾಹನ ನಿಲುಗಡೆ ಸ್ಥಳ, ಸಂಚಾರ ಮಾರ್ಗ ಬದಲಾವಣೆ ಕುರಿತೂ ನೀಲನಕ್ಷೆ ಹಿಡಿದು ಚರ್ಚೆ ನಡೆಸಿದರು.

ಹಾರಾಡಿದ ಹೆಲಿಕಾಪ್ಟರ್‌ಗಳು: ಅಲ್ಲದೇ, ಗುರುವಾರ ಮಧ್ಯಾಹ್ನವೇ ನಗರದಲ್ಲಿ ಹೆಲಿಕಾಪ್ಟರ್‌ಗಳು ನಗರದಲ್ಲಿ ಕೆಲ ಹೊತ್ತು ಅಭ್ಯಾಸ (ರಿಹರ್ಸಲ್) ನಡೆಸಿದವು. ಹೆಲಿಕಾಪ್ಟರ್‌ಗಳು ಆಕಾಶದಿಂದ ಅತ್ಯಂತ ಕೆಳ ಮಟ್ಟದಲ್ಲಿಯೇ ಹಾರಾಡಿದವು. ಇದರಿಂದ ನಗರದ ಜನರು ಪ್ರಧಾನಿ ಆಗಮನ ಇಂದೊ ನಾಳೆಯೊ ಎಂಬಂತೆ ಗೊಂದಲಕ್ಕೀಡಾದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.