ಜುಂಜಪ್ಪನ ಅಧ್ಯಯನ ಕೇಂದ್ರ: ಸೂಫಿ ಅಧ್ಯಯನ ಕೇಂದ್ರದ ಮಾದರಿಯಲ್ಲೇ ಜುಂಜಪ್ಪನ ಅಧ್ಯಯನ ಕೇಂದ್ರವನ್ನು ವಿ.ವಿ ಆರಂಭಿಸಬೇಕು ಎಂದು ಸಲಹೆ ನೀಡಿದರು. ಕುಲಪತಿ ಡಾ.ಎ.ಎಚ್. ರಾಜಾಸಾಬ್ ಮಾತನಾಡಿ, ‘ಬಿಕಾಂ, ಎಂಕಾಂ, ಬಿಬಿಎಂ, ಎಂಬಿಎ ತರಗತಿಗಳು, ಪ್ರಾಚ್ಯವಸ್ತು ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ, ಯೋಗ ಕೇಂದ್ರ ಮತ್ತು ಸೂಫಿ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುವುದು. ತಿಪಟೂರಿನಲ್ಲಿ 15 ಎಕರೆ ಜಮೀನು ನೀಡಿದ್ದಾರೆ ಅಲ್ಲಿ ತೆಂಗು ಅಭಿವೃದ್ದಿ ಕೇಂದ್ರವನ್ನು ಪ್ರಾರಂಭಿಸಲಾಗುವುದು’ ಎಂದರು.