ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಗಾಯನ: ಮೊನಿಶಾ, ನಮನಾ ಪ್ರಥಮ

Last Updated 12 ಸೆಪ್ಟೆಂಬರ್ 2011, 9:20 IST
ಅಕ್ಷರ ಗಾತ್ರ

ತುಮಕೂರು: ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಭಾನುವಾರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ಮೊನಿಶಾ (ಗ್ರಾಮಾಂತರ) ಹಾಗೂ ನಮನಾ (ನಗರ)  ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.

ಪರಿಣಿತಾ (ದ್ವಿತೀಯ), ಎಸ್.ವರ್ಷಾ (ತೃತೀಯ) ನಗರ ವಿಭಾಗ ಹಾಗೂ ಮಹಾಲಕ್ಷೀ (ದ್ವಿತೀಯ) ಹಾಗೂ ಕೆ.ಎನ್.ಸವಿತಾ (ತೃತೀಯ) ಸ್ಥಾನಕ್ಕೆ ಭಾಜನರಾದರು.

ಸಮಾಧಾನಕರ ಬಹುಮಾನ: ಗ್ರಾಮೀಣ ಹಾಗೂ ನಗರದ ವಿಭಾಗದಲ್ಲಿ ಭಾಗವಹಿಸಿದ್ದ ವಿ.ನಯನಾ, ಇಂಚರಾ, ಸಿದ್ಧರಾಮ, ಮಲ್ಲಪ್ಪ, ಎಸ್.ವಿಷ್ಣು, ಎಸ್.ವರ್ಷಾ, ವಿ.ರಂಜಿತಾ, ನವೀನ್,ಸಚಿನ್, ಎಂ.ಶಶಿಕಲಾ, ಎಂ.ಬಿ.ರಮ್ಯಾ, ಚಂದ್ರಶೇಖರಗೌಡ, ನಿಖಿಲ್,ರುದ್ರೇಶ್,  ಐಶ್ವರ್ಯ, ನಂದಿನಿ, ದಿವ್ಯಾ, ರೇಖಾ, ಆರ್.ಮಂಜುನಾಥ್, ನಿಶ್ಚಲ್ ಅವರಿಗೆ ಸಮಾಧಾನಕರ ಬಹುಮಾನ ದೊರೆಯಿತು.

ವಿಶ್ವಬಂಧು ಪತ್ತಿನ ಸಹಕಾರ ಸಂಘ ಹಾಗೂ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಜ್ಲ್ಲಿಲೆಯ ಪ್ರೌಢಶಾಲೆಗಳಿಗೆ ಹಮ್ಮಿಕೊಂಡಿದ್ದ  ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
 
ತೀರ್ಪುಗಾರರಾಗಿದ್ದ ಮುನಿಸ್ವಾಮಿ ಮಿಮಿಕ್ರಿ ಈಶ್ವರಯ್ಯ, ದಾಕ್ಷಾಯಿಣಿ ಹಾಗೂ ಶಕುಂತಲಾ ಅವರನ್ನು ಅಭಿನಂದಿಸಲಾಯಿತು.ನಿವೃತ್ತ ಶಿಕ್ಷಕ  ಟಿ.ಸಿ.ಉಮೇಶಕುಮಾರ್, ಸಂಘದ ಸದಸ್ಯ ಲೋಕೇಶ್ವರಪ್ಪ, ಶಿವರಾಜ್ ಮಾತನಾಡಿದರು. ಶಿವಮೂರ್ತಿ  `ಅಕ್ಕ ಕೇಳವ್ವ ನಾನೊಂದು ಕನಸೊಂದ ಕಂಡೆ~ ಹಾಡಿ ಸ್ಪರ್ಧೆಗೆ ಚಾಲನೆ ನೀಡಿದರು.  ಶಿವಕುಮಾರ್  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT