ಭಾನುವಾರ, ನವೆಂಬರ್ 17, 2019
21 °C

1.450 ಕೆಜಿ ಗಾಂಜಾ ವಶ: ಇಬ್ಬರ ಬಂಧನ

Published:
Updated:
Prajavani

ಉಡುಪಿ: ಪಂದುಬೆಟ್ಟು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಶಿವಮೊಗ್ಗ ಮೂಲದ ಫೈರೋಜ್, ಮೊಹಮ್ಮದ್ ಮೊಸೀನ್ ಎಂಬ ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 1.450 ಕೆ.ಜಿ ಗಾಂಜಾ, 2 ಮೊಬೈಲ್ ಫೋನ್, ಗಾಂಜಾ ತೂಕ ಮಾಡುವ ಮೆಷಿನ್‌, ನಗದು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಮೌಲ್ಯ ₹ 33,000. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿಐಬಿ ಘಟಕದ ಎಎಸ್ಐ ರವಿಚಂದ್ರ, ಸಿಬ್ಬಂದಿ ಸುರೇಶ, ಸಂತೋಷ ಕುಂದರ್, ಚಂದ್ರಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ, ಶಾಂತಾರಾಮ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)