ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡುಬಿದ್ರಿ | ಅದಾನಿ ಸಮೂಹ: ರಕ್ತದಾನ ಶಿಬಿರ

Published 25 ಜೂನ್ 2023, 14:08 IST
Last Updated 25 ಜೂನ್ 2023, 14:08 IST
ಅಕ್ಷರ ಗಾತ್ರ

ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್, ಉಡುಪಿ ಟಿಪಿಪಿ ಸಂಸ್ಥೆ, ಅದಾನಿ ಫೌಂಡೇಶನ್ ವತಿಯಿಂದ ಇಲ್ಲಿನ ಸ್ಥಾವರ ಹಾಗೂ ಪಣಂಬೂರಿನ ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ)ದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಶನಿವಾರ ‘ಗೋ-ರೆಡ್’ ಶೀರ್ಷಿಕೆಯಡಿ ಆಯೋಜಿಸಿತು.

ಬೃಹತ್ ಸಂಖ್ಯೆಯಲ್ಲಿ ಯುಪಿಸಿಎಲ್ ಹಾಗೂ ಇತರೆ ಗುತ್ತಿಗೆದಾರ ಉದ್ಯೋಗಿಗಳು ರಕ್ತದಾನ ಶಿಬಿರದಲ್ಲಿ ಸ್ವಇಚ್ಚೆಯಿಂದ ಭಾಗವಹಿಸಿದರು. 457 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಅದಾನಿ ಸಮೂಹದ ಸ್ಥಾಪಕ ಅಧ್ಯಕ್ಷ ಕಿಶೋರ್ ಆಳ್ವ, ಅದಾನಿ ಪ್ರತಿಷ್ಠಾನ ದೇಶದೆಲ್ಲೆಡೆ ಇರುವ ಅದಾನಿ ಸಮೂಹದ ಸಂಸ್ಥೆಗಳಲ್ಲಿ ಸ್ಥಾಪಕ ಗೌತಮ್ ಅದಾನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರತಿ ವರ್ಷ ಜೂನ್ 24ರಂದು ರಕ್ತದಾನ ಶಿಬಿರ ಹಮ್ಮಿಕೊಂಡು ಸಾವಿರಾರು ರಕ್ತದ ಯುನಿಟ್‌ಗಳನ್ನು ಆಯಾ ಪ್ರದೇಶದ ರಕ್ತ ನಿಧಿಗಳಿಗೆ ನೀಡುತ್ತಿದೆ. ಇದರಿಂದ ಅನೇಕ ಜನರಿಗೆ ಉಪಯೋಗವಾಗುತ್ತಿದ್ದು, ಉತ್ತಮ ಸಮಾಜ ಸೇವೆಯಾಗಿ ಮುಂದುವರೆಯುತ್ತಿದೆ’ ಎಂದರು.

‘ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ರಕ್ತದಾನ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಹರ್ಷಕರ ಸಂಗತಿ. ಈ ವರ್ಷದಿಂದ ಜೂನ್ 24ನ್ನು ಅದಾನಿ ದಿನ ಎಂದು ಆಚರಿಸಲಾಗುವುದು’ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಮುಖ್ಯಸ್ಥೆ ಡಾ. ವೀಣಾ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಪಲಕ್, ಅದಾನಿ ಪವರ್ ಲಿಮಿಟೆಡ್‌ನ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT