ಆನಂದ್ ಸಿಂಗ್, ಗಣೇಶ್ ಮಧ್ಯೆ ವೈಯಕ್ತಿಕ ಜಗಳ: ಜಯಮಾಲಾ

ಉಡುಪಿ: ಶಾಸಕರಾದ ಆನಂದ್ ಸಿಂಗ್ ಹಾಗೂ ಗಣೇಶ್ ನಡುವಿನ ಜಗಳ ವೈಯಕ್ತಿಕ. ಇದರಿಂದ ಪಕ್ಷದ ವರ್ಚಸ್ಸಿಗೆ ದಕ್ಕೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದರು.
ಅವರಿಗೆ ಪಕ್ಷ ಹೊಡೆದಾಡಿಕೊಳ್ಳಲು ಹೇಳಿರಲಿಲ್ಲ. ಅವರು ಜಗಳವಾಡಿಕೊಂಡರೆ ಪಕ್ಷ ಏನು ಮಾಡಲು ಸಾಧ್ಯ ಎಂದು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.
ಆನಂದ್ ಸಿಂಗ್ ಅವರನ್ನು ನೋಡಲು ಹೋಗಿಲ್ಲ; ಅವರು ಚೆನ್ನಾಗಿದ್ದಾರೆ. ಹಲ್ಲೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಜಯಮಾಲಾ ಹೇಳಿದರು.
ಬರಹ ಇಷ್ಟವಾಯಿತೆ?
2
0
0
0
0
0 comments
View All