ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿದ ವಸಂತ ಸಾಲಿಯಾನ್‌

ಬಾರ್ಕೂರು ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿದ ವಸಂತ ಸಾಲಿಯಾನ್‌
Last Updated 8 ಜನವರಿ 2023, 7:38 IST
ಅಕ್ಷರ ಗಾತ್ರ

ಬಾರ್ಕೂರು (ಬ್ರಹ್ಮಾವರ): ಗ್ರಾಮಾ ಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರಗಳು ವೇದಿಕೆ ಕಲ್ಪಿಸುವ, ದುಡಿಯುವ ಕೈಗಳಿಗೆ ಕೆಲಸ ಕೊಡುವ, ತಂತ್ರಜ್ಞಾನದ ಬಳಕೆಯ ಬಗ್ಗೆ ತರಬೇತಿ ಮತ್ತು ಮಾಹಿತಿ ನೀಡುವ ಮೂಲಕ ಗ್ರಾಮೀಣ ಭಾಗದ ಮಹಿಳೆಯರನ್ನು ಸಬಲರನ್ನಾಗಿ ಮಾಡುತ್ತಿದೆ ಎಂದು ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್‌ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ ಬ್ರಹ್ಮಾವರ ತಾಲ್ಲೂಕು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಬಾರ್ಕೂರಿನ ಶಿವಗಿರಿ ಕ್ಷೇತ್ರದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಗ್ರಂಥಾಲಯಗಳ ಆರಂಭ, ವಾತ್ಸಲ್ಯ ಕಾರ್ಯಕ್ರಮದಡಿ ನಿರಾಶ್ರಿತರಿಗೆ ನೆಲೆ ಕಲ್ಪಿಸುವ, ಮೂಲ ಸೌಕರ್ಯ ಕಲ್ಪಿಸುವ ಪ್ರಯತ್ನ, ಸ್ವ–ಉದ್ಯೋಗಕ್ಕೆ ಪೂರಕವಾಗಿ ಆರ್ಥಿಕ ಸೌಲಭ್ಯ ಮತ್ತು ತರಬೇತಿ ನೀಡುವ ಪ್ರಯತ್ನ, ಆರ್ಥಿಕ ಭದ್ರತೆ ಮತ್ತು ಉಳಿತಾಯದ ಮನೋಭಾವ ಬೆಳೆಸುವ ಬಗ್ಗೆ ನಿರಂತರ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಬಾರ್ಕೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಮಾಹೆಯ ಡಾ.ಪ್ರತಿಮಾ ಜಯಪ್ರಕಾಶ್‌ ಆಚಾರ್ಯ ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು.

ಗಿಳಿಯಾರು ಶ್ರೀ ಯಕ್ಷಿ ಜ್ಞಾನವಿಕಾಸ ಕೇಂದ್ರ ಮತ್ತು ಕೆಂಜೂರಿನ ಅಮರ ಜ್ಞಾನ ವಿಕಾಸ ಕೇಂದ್ರವನ್ನು ತಾಲ್ಲೂ ಕಿನ ಮಾದರಿ ಕೇಂದ್ರವನ್ನಾಗಿ ಗುರುತಿಸಲಾಯಿತು. ಸುಜಾತಾ ಪಾರಂಪಳ್ಳಿ ಮತ್ತು ರೇವತಿ ಹೇರಾಡಿ ಅವರನ್ನು ಗೌರವಿಸಲಾಯಿತು. ಎರಡು ನೂತನ ಜ್ಞಾನವಿಕಾಸ ಕೇಂದ್ರಗಳ ದಾಖಲಾತಿ ಹಸ್ತಾಂತರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಪ್ರಗತಿಪರ ಕೃಷಿಕ ಕೂಡ್ಲಿ ಶ್ರೀನಿವಾಸ ಉಡುಪ, ಜನಜಾಗೃತಿ ವೇದಿಕೆಯ ನಿರ್ಮಲಾ ಇದ್ದರು. ಯೋಜನಾಧಿಕಾರಿ ದಿನೇಶ್‌ ಶೇರಿಗಾರ ಸ್ವಾಗತಿಸಿದರು. ಜ್ಞಾನವಿಕಾಸದ ಸಮನ್ವ ಯಾಧಿಕಾರಿ ನೇತ್ರಾವತಿ ವರದಿ ವಾಚಿಸಿದರು. ಬಾರ್ಕೂರು ವಲಯದ ಮೇಲ್ವಿಚಾರಕಿ ಬಾಬಿ ವಂದಿಸಿದರು. ಕೃಷಿ ಮೇಲ್ವಿಚಾರಕ ರಾಜೇಂದ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT