ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರಿಗೆ ಅವಕಾಶ ನೀಡಿದರೂ ಮಾನಸಿಕವಾಗಿ ಸಿದ್ಧ: ಶಾಸಕ ರಘುಪತಿ ಭಟ್‌

ಪಕ್ಷದಲ್ಲಿ ಸದಾ ಹೊಸತನಕ್ಕೆ ಆದ್ಯತೆ: ಶಾಸಕ ರಘುಪತಿ ಭಟ್‌
Last Updated 6 ಮೇ 2022, 13:02 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ‌ಹೊಸಬರಿಗೆ ಅವಕಾಶ ನೀಡುವುದಾಗಿ ಪಕ್ಷ ಹೇಳಿದರೆ ಮಾನಸಿಕವಾಗಿ ಸಿದ್ಧನಿರುತ್ತೇನೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಪಕ್ಷದಲ್ಲಿ ಹೊಸತನಕ್ಕೆ ಹೆಚ್ಚು ಅವಕಾಶ ನೀಡುವುದಾಗಿ ಬಿ.ಎಲ್‌.ಸಂತೋಷ್‌ ನೀಡಿರುವ ಹೇಳಿಕೆ ಹಾಗೂ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಯತ್ನ ಕುರಿತು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ‘ಹೊಸತನಕ್ಕೆ ಬಿಜೆಪಿಯಲ್ಲಿ ಸದಾ ಅವಕಾಶಗಳು ಇರುತ್ತವೆ’ ಎಂದರು.

‘ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎಂದು ವರಿಷ್ಠರು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾದರಿಯಲ್ಲಿ ಆಂತರಿಕ ಚರ್ಚೆ ನಡೆಸಿ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾರೆ. ಶಾಸಕನಾಗಿರಲಿ ಅಥವಾ ಟಿಕೆಟ್‌ ಆಕಾಂಕ್ಷಿಯಾಗಿರಲಿ, ಅವರ ಜನಪರ ಕಾರ್ಯಗಳ ಕುರಿತು ಸಮೀಕ್ಷೆಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಾರೆ.

ಸಾಮಾನ್ಯವಾಗಿ ಜನಪರ ಕೆಲಸ ಮಾಡುವ ನಾಯಕರು, ಕಾರ್ಯಕರ್ತರಿಗೆ ಸ್ಪಂದಿಸುವವರು ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಸಮಸ್ಯೆಯಾಗುವುದಿಲ್ಲ. ಜನರಿಂದ ದೂರ ಇರುವವರಿಗೆ ಮಾತ್ರ ತೊಂದರೆಯಾಗಬಹುದು ಎಂದು ವಿಶ್ಲೇಷಿಸಿದರು.

ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಮಾನಸಿಕವಾಗಿ ತಯಾರಾಗಿರಬೇಕಾಗುತ್ತದೆ. ಪಕ್ಷದಲ್ಲಿ ಇಂಥದ್ದು ಬೇಕು ಎಂದು ಕೇಳುವಂತೆಯೂ ಇಲ್ಲ. ಕೊಟ್ಟಾಗ ಬೇಡ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆಯೂ ಇಲ್ಲ. 2004ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಹೆಚ್ಚು ಆಸಕ್ತಿ ಇಲ್ಲದಿದ್ದರೂ ಪಕ್ಷದ ಹಿರಿಯರ ಸೂಚನೆ ಮೇರೆಗೆ ನಿಲ್ಲಬೇಕಾಯಿತು ಎಂದು ಶಾಸಕ ರಘುಪತಿ ಭಟ್ ಹೇಳಿದರು.

‘ಆಜಾನ್‌, ಭಜನೆ ಎಲ್ಲರಿಗೂ ಕೇಳಬೇಕಿಲ್ಲ’

ಮಸೀದಿಯ ಎದುರು ಭಜನೆ ಮಾಡಿದರೆ ಕಿರಿಕಿರಿ ಸಹಜ. ಹಾಗೆಯೇ ಮಸೀದಿಗಳ ಆಜಾನ್‌ ಶಬ್ಧವೂ ನ್ಯಾಯಾಲಯದ ಆದೇಶದಷ್ಟೆ ಇರಬೇಕು. ಮಸೀದಿ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ಕಟ್ಟಲಾಗಿರುವ ಮೈಕ್‌ಗಳನ್ನು ಕೆಳಗಿಳಿಸಿ ಹೆಚ್ಚು ಶಬ್ಧ ಹೊರಸೂಸುವ ಹಾರ್ನ್‌ ಮೈಕ್‌ ಬದಲಿಗೆ ಸ್ಪೀಕರ್‌ ಬಳಸಬೇಕು. ಆಜಾನ್ ಆಗಲೀ, ಭಜನೆಯಾಗಲೀ ಊರಿನವರಿಗೆಲ್ಲ ಕೇಳಬೇಕಾಗಿಲ್ಲ. ಪ್ರಾರ್ಥನೆ ಮಾಡಲು ಬಂದವರಿಗೆ ಕೇಳುವಷ್ಟು ಶಬ್ಧ ಇದ್ದರೆ ಸಾಕು ಎಂದು ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT