ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರ ಸರ ದೋಚಿದ ಕಳ್ಳರು

ಗಂಟೆಯಲ್ಲಿ 2 ಕಡೆಗಳಲ್ಲಿ ಕೃತ್ಯ
Last Updated 25 ಡಿಸೆಂಬರ್ 2018, 17:05 IST
ಅಕ್ಷರ ಗಾತ್ರ

ಉಡುಪಿ: ನಗರದಲ್ಲಿ ಮಂಗಳವಾರ ಸರಣಿ ಸರಗಳವು ಪ್ರಕರಣಗಳು ನಡೆದಿದ್ದು ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಕೇವಲ ಗಂಟೆಯ ಅಂತರದಲ್ಲಿ 2 ಕಡೆಗಳಲ್ಲಿ ವೃದ್ಧರಿಂದ ಚಿನ್ನದ ಸರಗಳನ್ನು ದೋಚಲಾಗಿದೆ.

ಸೋಮವಾರ ಬೆಳಿಗ್ಗೆ 8.45ಕ್ಕೆ ಅಂಬಾಗಿಲು ಜಂಕ್ಷನ್‌ನ ಮೀನು ಮಾರುಕಟ್ಟೆ ಬಳಿ ವೆಂಕಟರಮಣ ಆಚಾರ್ಯ ಎಂಬುವರು ನಡೆದುಕೊಂಡು ಹೋಗುತ್ತಿರುವಾಗ ಬೈಕಿನಲ್ಲಿ ಬಂದ ಕಳ್ಳರು ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಈ ಸ್ಥಳದಲ್ಲಿ ಈಚೆಗೆ ಗಲಾಟೆಯಾಗಿದೆ. ಬಂಗಾರ, ನಗದು ಇಟ್ಟುಕೊಂಡು ಒಡಾಡಬಾರದು ಎಂದು ಭಯಭೀತಗೊಳಿಸಿದ್ದಾರೆ.

ನಂತರ ಕರ್ಚೀಫ್‌ನಲ್ಲಿ ಹಣ, ಬಂಗಾರದ ಚೈನ್‌ ಹಾಗೂ ವಾಚ್‌ ಇಡುವ ಹಾಗೆ ನಟಿಸಿ ವೆಂಕಟರಮಣ ಅವರಿಗೆ ಕರವಸ್ತ್ರ ಕೊಟ್ಟು ಪರಾರಿಯಾಗಿದ್ದಾರೆ. ಸ್ವಲ್ಪ ದೂರಹೋದ ಬಳಿಕ ಕರ್ಚೀಫ್‌ ಬಿಚ್ಚಿದಾಗ ಚಿನ್ನದ ಸರ ಇಲ್ಲದಿರುವುದು ಗಮನಕ್ಕೆ ಬಂದಿದೆ.

ಅದೇರೀತಿ9.25ಕ್ಕೆ ಭಾಸ್ಕರ್ ಪೂಜಾರಿ ಎಂಬವರು ಸಿಟಿ ಬಸ್‌ ನಿಲ್ದಾಣ ಸಮೀಪದ ಗುರುಕೃಪಾ ಸ್ಟುಡಿಯೋ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ, ಮೂವರು ಕಳ್ಳರು ಸೆಕ್ಯುರಿಟಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ತಪಾಸಣೆ ನೆಪದಲ್ಲಿ ಎಸ್‌ವಿಸಿ ಬ್ಯಾಂಕ್‌ನ ಸಮೀಪ ಕರೆದೊಯ್ದು, ಚಿನ್ನ, ಮೊಬೈಲ್, ವಾಚ್‌ ಬಿಚ್ಚಿಸಿಕೊಂಡು ಕರವಸ್ತ್ರದಲ್ಲಿ ಸುತ್ತಿಕೊಡುವಂತೆ ನಟಿಸಿ 12 ಗ್ರಾಂ ಚಿನ್ನದ ಸರವನ್ನು ಎಗರಿಸಿದ್ದಾರೆ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT